ಆದ್ಯೋತ್ ಸುದ್ದಿನಿಧಿ:
ಪಕ್ಷಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಪಕ್ಷಾಂತರ ಪಿಡುಗು ಮುಂದುವರಿದಿದ್ದು ಲೋಕಸಭಾಧ್ಯಕ್ಷ ಓಂಬಿರ್ಲಾ ರವರು ಡಿಸಂಬರ್2019 ರಲ್ಲಿ ಎಲ್ಲಾ ರಾಜ್ಯಗಳ ಸ್ಪೀಕರ್ ಸಮಾವೇಶವನ್ನು ನಡೆಸಿದ್ದರು. ಹಾಲಿ ಜಾರಿಯಲ್ಲಿರುವ ಸಂವಿಧಾನದ ಹತ್ತನೆ ಪರಿಚ್ಛೇದದಲ್ಲಿ ಬದಲಾವಣೆ ಮಾಡಲು
ಈ ಸಮಾವೇಶದಲ್ಲಿ ಕರ್ನಾಟಕ,ರಾಜಸ್ಥಾನ, ಹಾಗೂ ಒಡಿಸ್ಸಾ ರಾಜ್ಯಗಳ ಸ್ಪೀಕರ್ ಗಳ ಸಮಿತಿ ರಚಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು
ಮೇ.28 ಗುರುವಾರ ಬೆಂಗಳೂರು ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದರು.
ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ,ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,ಸಚೀವರಾದ ಗೋವಿಂದ ಕಾರಜೋಳ,ಜಗದೀಶ ಶೆಟ್ಟರ,ಬಸವರಾಜಬೊಮ್ಮಾಯಿ,ಮಾಧುಸ್ವಾಮಿ,ಸುರೇಶಕುಮಾರ
ಕಾಂಗ್ರೇಸ್ ನಾಯಕರಾದ ಡಿ.ಕೆ.ಶಿವಕುಮಾರ,ಆರ್.ವಿ.ದೇಶಪಾಂಡೆ,ಕೃಷ್ಣ ಭೈರೆ ಗೌಡ ಮುಂತಾದವರು ಭಾಗವಹಿಸಿದ್ದರು
ಸಭೆಯಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಗಳು, ರಾಜಕೀಯ ಪಕ್ಷಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು
ನಮ್ಮ ಶಾಸಕಾಂಗದ ಘನತೆ ಗೌರವವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ,ಪೀಠಾಸೀನ ಅಧಿಕಾರಿಯಾದ ಸ್ಪೀಕರ್ ಗೆ ಅನರ್ಹತೆ ಸಂಬಂಧ ಪರಮೋಚ್ಛ ಅಧಿಕಾರ ಇರಬೇಕು.ಕಾಲಮಿತಿಯೊಳಗೆ ಈ ಅನರ್ಹತೆಯ ಪ್ರಕರಣ ವಿಚಾರಣೆ ಮುಕ್ತಾಯ ಆಗಬೇಕು,ರಾಜೀನಾಮೆ ನೀಡಿದ ಶಾಸಕರಿಗೆ ಮರುಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು,ಅನರ್ಹ ಶಾಸಕರ ಕುಟುಂಬ ವರ್ಗದವರು ಸ್ಪರ್ಧಿಸದಂತೆ ತಿದ್ದುಪಡಿ ತರಬೇಕು,ಚುನಾವಣೋತ್ತರ ಮೈತ್ರಿಗೂ ಅವಕಾಶವನ್ನೂ ನೀಡಬಾರದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಗೆ ಸರ್ವಾಧಿಕಾರ ಇರಬೇಕು.ಇದರಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಬಾರದು
ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸಂಸದೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿ ಮಾಡುವಲ್ಲಿ ಸಾರ್ವಜನಿಕರ ಅಭಿಪ್ರಾಯವೂ ಮುಖ್ಯವಾಗಿದ್ದು ಜೂನ್ 10 ರ ಒಳಗೆ ಸಾರ್ವಜನಿಕರು ವಿಧಾನಸಭೆ ಕಾರ್ಯದರ್ಶಿಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು ಎಂದು ಹೇಳಿದರು.
ಈ ಬಗ್ಗೆ ಜೂನ್ 5 ರಂದು ವಿಧಾನಪರಿಷತ್ ಸದಸ್ಯರ ಜೊತೆಗೂ ಚರ್ಚೆ ನಡೆಸುತ್ತೇನೆ ಒಟ್ಟಾರೆ ಕಾಯ್ದೆ ಅನುಷ್ಠಾನವು ಸಂವಿಧಾನ ಬದ್ಧವಾಗಿರುವುದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತಿರಬೇಕು ಎಂದು ಹೇಳಿದ ಸ್ಪೀಕರ್ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸ್ಥಳ ಭೇಟಿಗೆ ತಡೆಯಾಜ್ಞೆ ವಿಚಾರದಲ್ಲಿ ಎಚ್.ಕೆ.ಪಾಟೀಲ್ ಪತ್ರ ಬರೆದಿರುವುದನ್ನು ಪರಿಶೀಲಿಸುತ್ತೇನೆ,ಯಾವುದೇ ಸಮಿತಿಯ ಅಧ್ಯಕ್ಷರಾಗಿರಲಿ ಅವರು ಸಭಾಧ್ಯಕ್ಷರ ಆದೇಶವನ್ನು ಪಾಲಿಸಬೇಕು ಲಾಕ್‌ಡೌನ್ ಹಿನ್ನೆಲೆ ಈ ತಡೆಯಾಜ್ಞೆ ನೀಡಲಾಗಿದ್ದು ಲಾಕ್‌ಡೌನ್ ಹಿನ್ನೆಲೆ ಮಾರ್ಗಸೂಚಿ ಅನ್ವಯ ಈ ಆದೇಶ ಹೊರಡಿಸಲಾಗಿದೆ ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಈ ಬಗ್ಗೆ ಮರುಪರಿಶೀಲನೆ ಮಾಡಲಾಗುತ್ತದೆ.ಅಲ್ಲಿವರೆಗೆ ಆ ಆದೇಶವನ್ನು ಪಾಲಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಹೇಳಿದರು.
👍