ರಾಜ್ಯಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಲ್ಲಿ ಸಿದ್ದಾಪುರದ ಹಳ್ಳಿಬೈಲ್ ಪ್ರೌಢಶಾಲೆಗೆ ತೃತೀಯ ಸ್ಥಾನ

ಸಿದ್ದಾಪುರ : ಮೂರು ದಿನಗಳ ಕಾಲ ಕೋಲಾರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯ ಕು.ಅನಂತ ಈಶ್ವರ ಹರಿಜನ ಹಾಗೂ ಸಂಗಡಿಗರು ಪ್ರದರ್ಶಿಸಿದ *ವೀರ ಮಯೂರ* ನಾಟಕ ತೃತೀಯ ಸ್ಥಾನ ಗಳಿಸಿದೆ.


ಕಳೆದ ಮೂರು ವರ್ಷದಿಂದ ಸತತವಾಗಿ ರಾಜ್ಯಮಟ್ಟದಲ್ಲಿ ಸ್ಪರ್ಧೆಯೊಡ್ಡಿದ್ದ ಈ ಶಾಲೆ ಈ ಬಾರಿ ಪ್ರಶಸ್ತಿ ಬಾಚಿಕೊಂಡಿದ್ದು ಸತತ ಪ್ರಯತ್ನಕ್ಕೆ ಸಿಕ್ಕ ಫಲವಾಗಿದೆ. ಮುಖ್ಯಾಧ್ಯಾಪಕರಾದ ವನಿತಾ ಜಿ ನಾಯ್ಕ ಮಾರ್ಗದರ್ಶನದಲ್ಲಿ ಶಿಕ್ಷಕ ಗೋಪಾಲ ನಾಯ್ಕ ಭಾಶಿ ವಿರಚಿತ ಐತಿಹಾಸಿಕ ನಾಟಕ *ವೀರ ಮಯೂರ* ನಾಟಕವನ್ನು ಹಿಂದಿ ಶಿಕ್ಷಕ ರಾಘವೇಂದ್ರ ನಾಯ್ಕ ಹಾಲಕ್ಕಿ ಬುಡಕಟ್ಟು ಶೈಲಿಯಲ್ಲಿ ನಿರ್ದೇಶಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ವಿನಾಯಕ ನಾಯ್ಕ ನೃತ್ಯ ನಿರ್ದೇಶಿಸಿದ್ದು ಗಣೇಶ ಹೆಗಡೆ ಹಾಡುಗಳನ್ನು ರಚಿಸಿದ್ದರು. ಅಪರ್ಣಾ ಶಾಸ್ತ್ರಿ ಪ್ರೊಜೆಕ್ಟ್ ತಯಾರಿಸಿದರೆ ಶಿಕ್ಷಕರಾದ ಮೀರಾ ಭಟ್ಟ, ಉಮೇಶ್ ಹೆಗಡೆ, ಮಾಧುರಿ ಭಟ್ಟಿ, ಲಲಿತಾ ವಂದಿಗೆ ಎಲ್ಲರೂ ಸಹಕಾರ ನೀಡಿದ್ದರು.

About the author

Adyot

Leave a Comment