ಆದ್ಯೋತ್ ನ್ಯೂಸ್ ಡೆಸ್ಕ್ : ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಪ್ರಿಲ್ 14ರ ವರೆಗೆ ವಿಧಿಸಿದ್ದ ಲಾಕ್ ಡೌನ್ ಅನ್ನು ಈ ತಿಂಗಳ ಕೊನೆಯವರೆಗೆ ವಿಸ್ತರಿಸಲಾಗಿದೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೂ ಕೂಡ ಲಾಕ್ ಡೌನ್ ಮುಂದುವರೆಸುವಂತೆ ಮನವಿ ಮಾಡಿದ್ದರು. ಇದರ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲೂ ಕೂಡ ಲಾಕ್ ಡೌನ್ ಅನ್ನು ಮುಂದುವರಿಸುವಂತೆ ಪ್ರಧಾನಿಯವರ ಸಲಹೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಏಪ್ರಿಲ್ 30ರ ವರೆಗೆ ಲಾಕ್ ಡೌನ್ ಮುಂದುವರಿಸಲಾಗಿದೆ ಅನ್ನೋ ಘೋಷಣೆ ಮಾಡಿದ್ದಾರೆ. ಇನ್ನು 2 ವಾರಗಳ ಕಾಲ ಲಾಕ್ ಡೌನ್ ಇನ್ನಷ್ಟು ವಿಭಿನ್ನವಾಗಿರಲಿದೆ. ಮೀನುಗಾರರಿಗೆ ಹಾಗೂ ರೈತರಿಗೆ ಇದರಿಂದ ವಿನಾಯ್ತಿ ನೀಡಲಾಗುವುದು. ಇನ್ನೆರಡು ದಿನಗಳಲ್ಲಿ ಲಾಕ್ ಡೌನ್ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ತಿಳಿಸಲಿದೆ ಅಂತ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಸರಿಯಾದ ನಿಲುವು