ಮೇ 3ರ ವರೆಗೆ ಕಠಿಣ ಲಾಕ್ ಡೌನ್ ಮುಂದುವರೆಯಲಿದೆ : ಜಿಲ್ಲಾಧಿಕಾರಿ

ಆದ್ಯೋತ್ ಸುದ್ದಿ ನಿಧಿ : ಮೇ 3ರ ವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರಿಯಲಿದ್ದು, ನಂತರ ನಾಲ್ಕು ತಿಂಗಳುಗಳ ಕಾಲ ಕೆಲವು ನಿಯಮಗಳೊಂದಿಗೆ ಜನರು ಸಹಕಾರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.


ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿಲ್ಲೆಯಲ್ಲಿ ಮೇ 3 ರ ವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಮೇ 3ರ ನಂತರ 4 ತಿಂಗಳುಗಳ ಕಾಲ ಕೆಲವೊಂದು ನಿಯಮಗಳನ್ನು ಹಾಕಲಾಗುತ್ತೆ. ಈಗಿನಂತೆಯೇ ಅನಗತ್ಯವಾಗಿ ಓಡಾಡುವಂತಿಲ್ಲ. ಅನಗತ್ಯವಾಗಿ ಓಡಾಡುವವರ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬೈಕಲ್ಲಿ ಇಬ್ಬರು ಹಾಗೂ ಕಾರಿನಲ್ಲಿ ನಾಲ್ವರು ಹೋಗಲು ಕೂಡಾ ಅವಕಾಶವಿಲ್ಲ. ಜನರು ತಪ್ಪು ಮಾಹಿತಿಯೊಂದಿಗೆ ಮತ್ತೆ ರಸ್ತೆಯಲ್ಲಿ ತಿರುಗಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಏಪ್ರಿಲ್ 21ರಿಂದ ಸರಕು ಸಾಗಾಣೆ, ಅಗತ್ಯ ವಸ್ತುಗಳ ಉತ್ಪಾದನೆ, ವೈದ್ಯಕೀಯ, ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮೇ 4ರ ಬಳಿಕ ಲಾಕ್‌ಡೌನ್ ತೆರೆದಲ್ಲಿ ಝೋನಲ್ ಕಂಟೈನ್‌ಮೆಂಟ್ ಪ್ರಾರಂಭಿಸಲಾಗುವುದು. ಗಡಿಭಾಗಗಳಲ್ಲಿ ಒಳಗೆ ಬರೋ ಹೊರಗೆ ಹೋಗೋ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಲಾಗುವುದು. ಹೊರ ಜಿಲ್ಲೆಯಿಂದ ತಮ್ಮ ಮನೆಗೆ ಬರುವವರು ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು. ಜಿಲ್ಲೆಯಿಂದ ಹೊರಗೆ ಹೋಗುವವರ ಮಾಹಿತಿ ಕೂಡಾ ಸಂಬಂಧಪಟ್ಟ ಜಿಲ್ಲೆಗೆ ನೀಡಲಾಗುವುದು. ಕದ್ದು ಮುಚ್ಚಿ ಬಂದು, ನಿಯಮ ಉಲ್ಲಂಘಿಸಿ ಗಲಾಟೆ ಮಾಡಿದ್ರೆ ರೌಡಿಶೀಟರ್ ಕೇಸ್ ಹಾಕುತ್ತೇವೆ ಎಂದರು.

ಆರೋಗ್ಯ ಕಾರ್ಯಕರ್ತರು ಪ್ರತೀ ಮನೆಗಳಿಗೆ ವಾರಕ್ಕೆ ಮೂರು ಬಾರಿ ಭೇಟಿ ನೀಡುವ ಕೆಲಸ ಮಾಡಲಾಗುವುದು. ಕಮ್ಯೂನಿಟಿ ರಿಪೋರ್ಟಿಂಗ್ ಮೂಲಕ ಪ್ರತೀ ಮನೆಗಳ ಮಾಹಿತಿ ಸಂಗ್ರಹಿಸಲಾಗುವುದು. ಲಾಕ್‌ಡೌನ್ ತೆಗೆದರೂ ಕೂಡ ವಸ್ತುಗಳನ್ನು ಮನೆ ಮನೆಗೆ ಪೂರೈಕೆಯಾಗುವಂತೆ ಮುಂದಿನ 3-4 ತಿಂಗಳ ಕಾಲ ನಡೆಯಲಿದೆ. ತರಕಾರಿ ಹಾಗೂ ಮೀನು ಮಾರುಕಟ್ಟೆ ತೆರೆಯಲಾಗುವುದಿಲ್ಲ ಎಂದರು.

About the author

Adyot

Leave a Comment