ಜನರ ಕಬ್ಬಿನ ಹಾಲಿನ ದಾಹ ನೀಗಿಸಿದ ‘ಆಲೆಮನೆ ಹಬ್ಬ’

ಸಿದ್ದಾಪುರ : ಈಗ ಮಲೆನಾಡಿನ ಜಿಲ್ಲೆಗಳಲ್ಲಿ ಆಲೆಮನೆಯ ವೈಭವ. ಕಬ್ಬುಗಳನ್ನು ಬೆಳೆಯುವವರು ವಿರಳವಾದ್ರೂ ಕೂಡ ಬೆಳೆದಿರೋ ಕಬ್ಬು ಬೆಳೆಗಾರರು ಆಲೆಮನೆಯನ್ನು ಮಾಡಿ ಬೆಲ್ಲದ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಕೆಲವರು ವಿರಳವಾದ ಕಬ್ಬಿನ ಹಾಲನ್ನು ತಮ್ಮ ಉಪಯೋಗಕ್ಕಾಗಿ ಬಳಸದೆ ಬರುವ ಜನರಿಗಾಗಿ ಮೀಸಲಿಡುತ್ತಾರೆ. ‘ಆಲೆಮನೆ ಹಬ್ಬ’ ಅನ್ನೋ ವಿಶೇಷ ಕಾನ್ಸೆಪ್ಟ್ ಇದಕ್ಕೆ ಸಾಕ್ಷಿಯಾಗುತ್ತದೆ.


ಅಂತಹ ಆಲೆಮನೆ ಹಬ್ಬವೊಂದು ಸಿದ್ದಾಪುರ ತಾಲೂಕಿನ ಕ್ಯಾದಗಿಯ ಜಿಡ್ಡಿಯಲ್ಲಿ ನಡೆಯಿತು. ಜಿಡ್ಡಿಯ ಗೋಪಾಲ ಭಟ್ಟರ ಮನೆಯಲ್ಲಿ ನಡೆದ ಆಲೆಮನೆ ಹಬ್ಬಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಕಳೆದ ವರ್ಷ ಸಣ್ಣ ಪ್ರಮಾಣದ ಆಲೆಮನೆ ಹಬ್ಬವನ್ನು ಮಾಡಿದ್ದ ಇವರು ಈ ವರ್ಷ ಸುಮಾರು 1100 ಜನರಿಗೆ ಅನಿಯಮಿತ ಪ್ರಮಾಣದಲ್ಲಿ ಕಬ್ಬಿನ ಹಾಲನ್ನು ಉಣಬಡಿಸಿ ಸ್ವಾರ್ಥಪರತೆ ಮೆರೆದರು. ಬಂದ ಜನರಿಗೆ ತೃಪ್ತಿಗಾಗಿ ಕಬ್ಬಿನ ಹಾಲಿನ ಜೊತೆಗೆ ಮಿರ್ಚಿ, ಚಟ್ನಿ ಕೋಂಬಿನೇಷನ್ ಹಾಗೂ ಮಸಾಲಾ ಮಂಡಕ್ಕಿಗಳನ್ನೂ ಕೂಡ ಒದಗಿಸಲಾಯಿತು. ಇಲ್ಲಿನ ಇನ್ನೊಂದು ವಿಶೇಷವೆಂದರೆ ಆಲೆಗಾಣದಲ್ಲಿ ಕೋಣ ಹಾಗೂ ಟ್ರಾಕ್ಟರ್ ಬದಲಿಗೆ ಬೈಕ್ ಕಟ್ಟಿ ಓಡಿಸಿದ್ದು. ಹಬ್ಬಕ್ಕಾಗಿ ವಿಶಾಲವಾದ ಪೆಂಡಾಲ್ ಹಾಕಿ ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದ್ದು. ಹಬ್ಬಕ್ಕೆ ಬಂದ ಜನರು ಹಾಲಿನ ರುಚಿಯನ್ನು ಸವಿದು ಗೋಪಾಲ ಭಟ್ಟರ ಈ ಕಾರ್ಯವನ್ನು ಪ್ರಶಂಸಿಸಿದರು.

About the author

Adyot

1 Comment

Leave a Comment