ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ನ್ಯೂಜಿಲೆಂಡ್ ನ ಹೆಗ್ಲೆ ಓವಲ್ ನಲ್ಲಿ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಸೋತು ಸರಣಿ ಸೋಲನ್ನನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 242 ರನ್ ಗಳಿಗೆ ಸರ್ವಪತನ ಕಂಡಿತು. ಮೊದಲನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಕೂಡ 235 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು. 7 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೇವಲ 124 ರನ್ ಗಳಿಗೆ ಅಲೌಟ್ ಆಗುವುದರ ಮುಖಾಂತರ ನ್ಯೂಜಿಲೆಂಡ್ ಗೆ 132 ರನ್ ಗಳ ಸುಲಭದ ಗುರಿ ನೀಡಿತು. 132 ರ ಟಾರ್ಗೆಟ್ ನೊಂದಿಗೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಇನ್ನೂ 2 ದಿನದ ಆತ ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಇದರೊಂದಿಗೆ 2 ಪಂದ್ಯದಲ್ಲಿ ಸೋತ ಭಾರತ ಸರಣಿಯನ್ನು 0-2 ರೊಂದಿಗೆ ನ್ಯೂಜಿಲೆಂಡ್ ಗೆ ಬಿಟ್ಟುಕೊಟ್ಟಿತು.