ಆದ್ಯೋತ್ ನ್ಯೂಸ್ ಡೆಸ್ಕ್ : ರಾಜ್ಯಾದ್ಯಂತ ಭಾನುವಾರ ಮಾರ್ಚ್ 15 ರಂದು ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನ ಮುಂದೂಡಲಾಗಿದೆ.
ರಾಜ್ಯಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 15 ರಂದು ಅರ್ಹತಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಪ್ರವೇಶ ಪತ್ರ ಕೂಡ ತಯಾರಾಗಿತ್ತು. ಆದರೆ ಇಂದು ಪರಿಕ್ಷಾರ್ಥಿಗಳು ಪ್ರವೇಶ ಪತ್ರಕ್ಕಾಗಿ ಇಲಾಖೆಯ ವೆಬ್ ಸೈಟ್ ಗೆ ಹೋದಾಗ ಪರೀಕ್ಷೆ ಮುಂದೂಡಿರುವುದು ಗಮನಕ್ಕೆ ಬಂದಿದೆ. ಪರೀಕ್ಷೆಯನ್ನ ಮಾರ್ಚ್ 29ರ ರವಿವಾರದಂದು ನಡೆಸಲಾಗುವುದು ಅಂತ ಇಲಾಖೆಯ ವೆಬ್ಸೈಟ್ ನಲ್ಲಿ ನಮೂದಿಸಲಾಗಿದೆ. ಯಾವ ಕಾರಣಕ್ಕೆ ಪರೀಕ್ಷೆ ಮುಂದೂಡಲಾಗಿದೆ ಅನ್ನೋ ಬಗ್ಗೆ ಇಲಾಖೆಯ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.
👌👌