ಆದ್ಯೋತ್ ಸುದ್ದಿನಿಧಿ:
ಮೇ1 ಕಾರ್ಮಿಕರ ದಿನಾಚರಣೆ ವಿಶ್ವದ ಬಹಳಷ್ಟು ರಾಷ್ಟ್ರಗಳು ಕಾರ್ಮಿಕದಿನಾಚರಣೆಯನ್ನು ಆಚರಿಸುತ್ತಾರೆ.ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ ದಿನಾಚರಣೆ ಇಂತಹ ದಿನಾಚರಣೆಯಷ್ಟೆ ಮಹತ್ವದ್ದಾಗಿರುವುದು ಕಾರ್ಮಿಕ ದಿನಾಚರಣೆ.
1886 ರ ಮೇ 4 ರಂದು ಅಮೇರಿಕಾ ದೇಶದ ಚಿಕಾಗೋನಗರದ ಇಲಿನಾಯ್ಸ್ ಪ್ರದೇಶದ ಹೇಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ವಿರೋಧಿಸಿ ಜಯಶೀಲರಾದ ಕಾರಣ ಕಾರ್ಮಿಕ ಪ್ರಭುತ್ವದ ಉದಯದ ಕುರುಹಾಗಿ ಕಾರ್ಮಿಕ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.
ಇಂದು ಕಾರ್ಮಿಕರು ಅಭದ್ರತೆಯಿಂದ ಬಳಲುತ್ತಿದ್ದಾರೆ.ಸರಕಾರಿ ಸ್ವಾಮ್ಯದ ಅನೇಕ ಸಂಸ್ಥೆಗಳು ಖಾಸಗಿಯವರ ಪಾಲಾಗುತ್ತಿದೆ
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಸುವ ಪದ್ದತಿ ಜಾರಿಗೆ ಬಂದಿರುವ ಕಾರಣ ಕಾರ್ಮಿಕರು ಕಡಿಮೆ ಸಂಬಳದಲ್ಲಿ ಅತಿ ಹೆಚ್ಚು ದುಡಿಯುವಂತಾಗಿದೆ.ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಂಬಳಕ್ಕಾಗಿ ಖಾಸಗಿ ವ್ಯಕ್ತಿ/ಸಂಸ್ಥೆಯ ಮುಂದೆ ಅಂಗಲಾಚುವ ಪರಿಸ್ಥಿತಿ ಬಂದಿದೆ ಒಟ್ಟಾರೆ ಕಾರ್ಮಿಕರ ಪರಸ್ಥಿತಿ ಹದಗೆಟ್ಟು ಹೋಗಿದೆ.
ಸ್ವಚ್ಛತೆ,ಭದ್ರತೆ,ಕಟ್ಟಡನಿರ್ಮಾಣ,ವ್ಯವಹಾರ,ಆಹಾರೋದ್ಯಮ,ವೈದ್ಯಕೀಯ,ಕೃಷಿ ಸೇರಿದಂತೆ ಹತ್ತು ಹಲವು ಕೇತ್ರದಲ್ಲಿ ಕಾರ್ಮಿಕವರ್ಗ ದುಡಿಯುತ್ತಿದೆ ಒಟ್ಟಾರೆ ಜಗತ್ತಿನ ಪ್ರತಿಯೊಂದು ಕೆಲಸ ಕಾರ್ಯಗಳು ನಡೆಯುತ್ತಿರುವುದು ಈ ಕಾರ್ಮಿಕರಿಂದಲೆ.
ಆದರೆ ಕೆಲವು ಸಂಘಟನೆಗಳು ಕಾರ್ಮಿಕ ವರ್ಗವನ್ನು ಕೆಲವು ಉದ್ಯೋಗಕ್ಕಷ್ಟೆ ಸೀಮಿತಗೊಳಿಸಿರುವ ಕಾರಣ ಬಹುದೊಡ್ಡ ವರ್ಗ ಅಸಂಘಟಿತವಲಯದಲ್ಲೆ ಇದೆ.
ಕಾರ್ಮಿಕರು ಕೇವಲ ತಮ್ಮ ಕುಟುಂಬ ಪೋಷಣೆಯನ್ನಷ್ಟೆ ಮಾಡದೆ ತಾವು ದುಡಿಯುತ್ತಿರುವ ಸಂಸ್ಥೆಗಳ ಅಭಿವೃದ್ಧಿಗೆ ಕರಾಣರಾಗುವ ಮೂಲಕ ದೇಶದ ಆರ್ಥಿಕ ಭದ್ರತೆಗೂ ಕಾರಣರಾಗಿದ್ದಾರೆ.
ಸ್ವಾತಂತ್ರ್ಯ ಬಂದನಂತರದಲ್ಲಿ ಆಡಳಿತ ನಡೆಸಿದ ಎಲ್ಲಾ ಸರಕಾರಗಳೂ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೂಲಕ ಕಾರ್ಮಿಕರನ್ನು ತುಳಿಯುವುದರಲ್ಲೆ ನಿರತವಾಗಿವೆ.
ಕಾರ್ಮಿಕರ ಕಲ್ಯಾಣಕ್ಕೆಂದು ಪ್ರತ್ಯೇಕ ಇಲಾಖೆಯೇ ಇದ್ದರೂ ಕನಿಷ್ಠ ಕೂಲಿ ನಿಗದಿ ಪಡಿಸಲು ಸಾಧ್ಯವಾಗುತ್ತಿಲ್ಲ.
ಕನಿಷ್ಠ.18000 ರೂ. ವೇತನ ನೀಡಬೇಬ ಕಾರ್ಮಿಕರ ಬೇಡಿಕೆ ಇನ್ನೂ ಈಡೇರಿಲ್ಲ.
ಖಾಸಗಿವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಷ್ಟೆ ಪ್ರಮಾಣದಲ್ಲಿ ಸರಕಾರಿ ವಲಯದಲ್ಲೂ ಕಾರ್ಮಿಕರು ದುಡಿಯುತ್ತಿದ್ದಾರೆ ಆದರೆ ಇವರಿಗೆ ಕನಿಷ್ಠ ಸಂಬಳವನ್ನು ಸರಕಾರ ನಿಗದಿ ಪಡಿಸಿಲ್ಲ
ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವ. ಆಶಾಕಾರ್ಯಕರ್ತೆಯರು,ಶಿಕ್ಷಣ ಇಲಾಖೆಯಲ್ಲಿ ದುಡಿಯುತ್ತಿರುವ ಬಿಸಿ ಊಟದ ತಯಾರಕರು,ವಿವಿಧ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರು,ದೂರವಾಣಿ ಇಲಾಖೆಯಲ್ಲಿರಿವವರು ಇವರಿಗೆಲ್ಲ ಕನಿಷ್ಠ ಸಂಬಳವೂ ಇಲ್ಲ, ಕೊಡುವ ಸಂಬಳವನ್ನು ನಿಗದಿತ ಸಮಯದಲ್ಲಿ ನೀಡುತ್ತಲೂ ಇಲ್ಲ.
ಹೀಗೆ ಸರಕಾರಗಳು ತಮ್ಮಲ್ಲೆ ಹುಳುಕನ್ನು ಇಟ್ಟುಕೊಂಡು ಕಾರ್ಮಿಕರ ಪರವಾಗಿ ಸಹಾನುಭೂತಿ ತೋರಿಸುವುದು,ಕಾರ್ಮಿಕ ದಿನಾಚರಣೆ ಆಚರಿಸುವುದು ಎಷ್ಟು ಸರಿ?
ದೇಶದಲ್ಲಿ ಕಾರ್ಮಿಕ ಸಂಘಟನೆಗಳು ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿವೆ.ಪ್ರಮುಖ ರಾಜಕೀಯ ಪಕ್ಷಗಳು ಕಾರ್ಮಿಕ ವಿಭಾಗವನ್ನೇ ಹೊಂದಿವೆ,ಆದರೆ ಇವೆಲ್ಲವೂ ಮತಗಳಿಕೆಗೆ,ಹಣ ಸಂಪಾದನೆಗೆ ಸೀಮಿತವಾಗಿದೆ.
ಒಂದೊಂದು ಕಾರ್ಮಿಕ ಸಂಘಟನೆ ಒಂದೊಂದು ಇಲಾಖೆಯ ಕಾರ್ಮಿಕರ ಪರವಾಗಿ ನಿಂತಿರುವ ಕಾರಣವಾಗಿ ಕಾರ್ಮಿಕರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಎಲ್ಲಾ ಸಮಾನ ಮನಸ್ಕರೂ ಒಟ್ಟಾಗಿ ಅಸಂಘಟಿತರಾಗಿರುವ ಕಾರ್ಮಿಕರನ್ನು ಸಂಘಟಿತಗೊಳಿಸಿ ಅವರ ಹಕ್ಕುಗಳು ಅವರಿಗೆ ಸಿಗುವಂತೆ ಮಾಡಿದಲ್ಲಿ ಕಾರ್ಮಿಕ ದಿನಾಚರಣೆ ಸಾರ್ಥಕತೆಯನ್ನು ಪಡೆಯುತ್ತದೆ.