ನಾಳೆ ಪಲ್ಸ್ ಪೊಲಿಯೋ ದಿನ

ಸಿದ್ದಾಪುರ : ನಾಳೆ ರವಿವಾರ ದಿನಾಂಕ 19ರಂದು ಪಲ್ಸ್ ಪೋಲಿಯೋ ದಿನ. ರಾಜ್ಯಾದ್ಯಂತ 5 ವರ್ಷದವರೆಗಿನ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಲಾಗುವುದು.

ಸಿದ್ದಾಪುರ ತಾಲೂಕಿನಾದ್ಯಂತ 5 ವರ್ಷದ ಒಳಗಿನ 5730 ಮಕ್ಕಳಿದ್ದು, ವಿವಿಧ ಕಡೆಗಳಲ್ಲಿ 63 ಬೂತ್ ಗಳನ್ನು ತೆರೆಯಲಾಗಿದೆ. ಅಲ್ಲದೆ ಒಂದು ಮೊಬೈಲ್ ಬೂತ್ ಜಾಗೂ ಬಸ್ ನಿಲ್ದಾಣದಲ್ಲಿ ಒಂದು ಬೂತ್ ಇರುತ್ತದೆ.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೂತ್ ನಲ್ಲಿ ಪೋಲಿಯೋ ಹನಿ ಹಾಕಲಾಗುವುದು. ದಿನಾಂಕ 20 ಸೋಮವಾರ ಮತ್ತು ದಿನಾಂಕ 21ಮಂಗಳವಾರ ಮನೆಮನೆ ಭೇಟಿ ಇರುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.

About the author

Adyot

Leave a Comment