ಭಾರತ ಪ್ರವಾಸದಲ್ಲಿ ಮಾರ್ದನಿಸಿದ ‘ನಮಸ್ತೇ ಟ್ರಂಪ್’

ಆದ್ಯೋತ್ ನ್ಯೂಸ್ ಡೆಸ್ಕ್ : ವಿಶ್ವದ ದೊಡ್ಡಣ್ಣ, ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತ ಪ್ರವಾಸವನ್ನು ಇಂದಿನಿಂದ ಆರಂಭಿಸಿದ್ದು ‘ನಮಸ್ತೇ ಟ್ರಂಪ್’ ಮಾರ್ದನಿಸಿದೆ.


ಇಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮೇರಿಕಾ ಅಧ್ಯಕ್ಷರನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್ ನ ಮೊಟೆರಾ ಕ್ರೀಡಾಂಗಣವನ್ನ ಉದ್ಘಾಟಿಸಿದ ಟ್ರಂಪ್ ‘ನಮಸ್ತೇ ಟ್ರಂಪ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಂತರ ಸಬರಮತಿ ಗಾಂಧೀಜಿಯವರ ಆಶ್ರಮಕ್ಕೆ ಭೇಟಿ ನೀಡಿ, ಭಾರತದ ಪ್ರಧಾನಿ ಮೋದಿಯವರೊಂದಿಗೆ ಕೆಲ ಕಾಲ ಕಳೆದರು. ನಂತರ ಆಗ್ರಾ ದ ತಾಜ್ ಮಹಲ್ ಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿದ ಟ್ರಂಪ್ ರಾಷ್ಟ್ರಪತಿಗಳ ಆಹ್ವಾನದ ಮೇರೆಗೆ ಔತಣಕೂಟಕ್ಕಾಗಿ ರಾಜಭವನ ತಲುಪಿದ್ದಾರೆ. ಇಂದು ದೆಹಲಿಯಲ್ಲೇ ಟ್ರಂಪ್ ವಾಸ್ತವ್ಯ ಮಾಡಲಿದ್ದಾರೆ.

About the author

Adyot

Leave a Comment