ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಟಿ.ಎಸ್.ಎಸ್.ಆಸ್ಪತ್ರೆಯ ನಿರ್ಲಕ್ಷ ಹಾಗೂ ಅಸಹಕಾರದಿಂದ ಸಿದ್ದಾಪುರ ತಾಲೂಕಿನ ಹೆಗ್ಗೋಡುಮನೆಯ ಜೈಶೀಲ ಸದಾನಂದ ಗೌಡರ್ (58) ಎನ್ನುವವರು ಮರಣಹೊಂದಿದ್ದಾರೆ ಎಂದು ಹೆಗ್ಗೋಡುಮನೆ ಕುಟುಂಬಸ್ಥರು ಆರೋಪಿಸಿದ್ದಾರಲ್ಲದೆ ಡಿವೈಎಸಪಿಯವರಿಗೆ ಪೊಲೀಸ್ ದೂರನ್ನು ನೀಡಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿರುವ ಹೆಗ್ಗೋಡು ಮನೆಯ ಕುಟುಂಬಕ್ಕೆ ಸೇರಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹಾಗೂ ತಾಪಂ ಅಧ್ಯಕ್ಷ ಸುಧೀರ್ ಗೌಡರ್ ಸುದ್ದಿಗೋಷ್ಠಿಯಲ್ಲಿ ಹಲವು ದಾಖಲೆಗಳ ಸಹಿತ ಆರೋಪಿಸಿದ್ದಾರೆ.
ದಿ.18ರಮದು ಜೈಶೀಲ ಗೌಡರ್ ಆರೋಗ್ಯದ ತೊಂದರೆ ಎಂದು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ ವೈದ್ಯರು ಪರೀಕ್ಷಿಸಿ ಕೆಲವು ಔಷಧಗಳನ್ನು ನೀಡಿದ್ದರು. ಕಡಿಮೆಯಾಗದ ಕಾರಣ ಪುನಃ ದಿ.21ರಂದು ಆಸ್ಪತ್ರೆಗೆ ಬಂದಾಗ ಜಾಂಡೀಸ್ ಲಕ್ಷಣವಿದೆ,ಕಿಡ್ನಿ ಸಮಸ್ಯೆ ಇದೆ ನಮ್ಮಲ್ಲಿ ವೆಂಟಿಲೆಟರ್ ಸೌಲಭ್ಯವಿಲ್ಲ ಕಾರಣ ಬೇರೆ ಕಡೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿದ್ದಾರೆ.ಅಲ್ಲದೆ ಕೊವಿಡ್ ಟೆಸ್ಟ್ ನಡೆಸಿದ್ದಾರೆ ನೆಗೆಟಿವ್ ರಿಪೋರ್ಟ್ನ್ನು ನೀಡಿದ್ದಾರೆ. ನಂತರ ರೋಗಿಯ ಇಚ್ಚೆಯಂತೆ ಟಿ.ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಆದರೆ ಅಲ್ಲಿ ನಮ್ಮನ್ನು ಒಳಗೆ ಬಿಟ್ಟುಕೊಂಡಿಲ್ಲ ಯಾರೂ ಬಂದು ಪರೀಕ್ಷಿಸಲೂ ಇಲ್ಲ ನಾವು ಅಸಹಾಯಕರಾಗಿ ಸಂಜೆ ಆರು ಗಂಟೆಯಿಂದ ಎಂಟು ಗಂಟೆಯವರೆಗೆ ಕಾದರು ಪ್ರಯೋಜನವಾಗಿಲ್ಲ ಟಿಎಸ್ಎಸ್ ಮುಖ್ಯಸ್ಥರಾದ ರವೀಶ ಹೆಗಡೆ,ದೀಪಕ ದೊಡ್ಡೂರ ಗಮನಕ್ಕೆ ತಂದಾಗ ಅವರು ಫೋನ್ ಮಾಡಿ ಸೇರಸಿಕೊಳ್ಳಲು ಸೂಚಿಸಿದರು ವೈದ್ಯರು ಸೇರಿಸಿಕೊಂಡಿಲ್ಲ ನಂತರ ನಾವು ಅನಿವಾರ್ಯವಾಗಿ ಹುಬ್ಬಳ್ಳಿ ಕೆಎಂಸಿ ಆಸ್ಪತ್ರಗೆ ಕರೆದುಕೊಂಡು ಹೋದೆವು ಒಂದು ದಿನದ ನಂತರ ಅವರು ಮರಣ ಹೊಂದಿದರು.ಅಲ್ಲಿ ತಡವಾಗಿ ಬಂದಿದ್ದೀರಿ ಮೊದಲೆ ಬಂದಿದ್ದರೆ ರೋಗಿಯನ್ನು ಉಳಿಸಬಹುದಿತ್ತು ಎಂದು ಹೇಳಿದ್ದಾರೆ
ಟಿಎಸ್ಎಸ್ ವೈದ್ಯರ ಅಸಹಕಾರದಿಂದಲೇ ಜೈಶೀಲ ಗೌಡರ್ ಮರಣ ಹೊಂದಿದ್ದಾರೆ ಎಂದು ಸಿ.ಎಸ್.ಗೌಡರ್ ಆರೋಪಿಸಿದರು.
ಸುಧೀರ್ ಗೌಡರ್ ಮಾತನಾಡಿ,ನಮ್ಮ ಕುಟುಂಬದ ವ್ಯವಹಾರಗಳು ಟಿಎಸ್ಎಸ್ನಲ್ಲೆ ಮಾಡುತ್ತೇವೆ ನಾವೆಲ್ಲರು ಅಲ್ಲಿ ಸದಸ್ಯರಿದ್ದೇವೆ ನಮ್ಮಂತಹವರಿಗೆ ಹೀಗೆ ಆದರೆ ಜನಸಾಮಾನ್ಯರ ಪರಿಸ್ಥಿತಿ ಈ ಆಸ್ಪತ್ರೆಯಲ್ಲಿ ಹೇಗಿರಬಹುದು. ಹಿಂದೆ ಸಂಸದರು ಇಲ್ಲಿಯ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿದಾಗ ನಾವು ಖಂಡಿಸಿದ್ದೇವು ಆದರೆ ಈಗ ಸತ್ಯ ನಮಗೆ ತಿಳಿದಿದೆ. ಕೊವಿಡ್ ಇದ್ದವರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆಗೆ ಸೂಚನೆ ಇಲ್ಲವೇ? ಈ ಆಸ್ಪತ್ರೆ ಸರಕಾರದ ಅಡಿಯಲ್ಲಿ ಬರುವುದಿಲ್ಲವೇ? ಈಗಾಗಲೇ ನಾವು ಡಿವೈಎಸ್ಪಿಯವರಿಗೆ ಪೊಲೀಸ್ ದೂರು ದಾಖಲಿಸಿದ್ದೇವೆ,ಗ್ರಾಹಕರ ವೇದಿಕೆಯಲ್ಲಿ ವ್ಯಾಜ್ಯ ಹೂಡಲಿದ್ದೇವೆ.ಮೆಡಿಕಲ್ ಕೌನ್ಸಿಲ್ಗೆ ದೂರು ನೀಡುತ್ತಿದ್ದೇವೆ. ಸೇವೆಯ ಹೆಸರಿನಲ್ಲಿ ಜನಸಾಮಾನ್ಯರ ಬಗ್ಗೆ ನಿರ್ಲಕ್ಷ ತೋರುವ ಇಂತಹ ಆಸ್ಪತ್ರೆಯ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್,ಮೃತ ಜೈಶೀಲ ಗೌಡರ್ ಪುತ್ರ ಸುನಯ ಗೌಡರ್,ವೀರಶೈವ ಸಂಘದ ಅಧ್ಯಕ್ಷ ಪರಮೇಶ್ವರ ಕಾನಳ್ಳಿಮಠ,ಗಂಗಾಧರ ಗೌಡರ್,ಕೆ.ಪಿ.ಗೌಡ ಹೂಕಾರ,ಷಣ್ಮುಖ ಗೌಡರ್ ಮುಂತಾದವರು ಉಪಸ್ಥಿತರಿದ್ದರು.