ಉ.ಕ.ಜಿಲ್ಲೆಯ ಸಿದ್ದಾಪುರದ ಜಿಡ್ಡಿ ಸೀಲ್ ಡೌನ್?

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕೊರ್ಲಕೈ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿಡ್ಡಿ ಗ್ರಾಮದ ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರಲ್ಲಿ ಕೊವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಈಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗುತ್ತಿದೆ ಎಂದು ಆದ್ಯೋತ್ ನ್ಯೂಸ್ ಗೆ ತಿಳಿದು ಬಂದಿದೆ.

ಮೇ 20ರಂದು ವಿದೇಶದಿಂದ ಬಂದಿದ್ದ ಈ ವ್ಯಕ್ತಿ 7 ದಿನ ಹೊಟೆಲ್ ಕ್ವಾರೆಂಟನ್ ಮುಗಿಸಿ ಊರಿಗೆ ಮರಳಿ ಹೋಮ್ ಕ್ವಾರಂಟೈನ್ ನಲ್ಲಿದ್ದ. ಪ್ರಥಮ ವರದಿಯಲ್ಲಿ ನೆಗೆಟಿವ್ ಬಂದ
ಕಾರಣ ಹೊಟೆಲ್ ಕ್ವಾರೆಂಟೆನ್ಂದ ಬಿಡುಗಡೆಗೊಳಿಸಿ
ಹೊಂಕ್ವಾರೆಂಟೆನ್ ಗೆ ಒಳಪಡಿಸಲಾಗಿತ್ತು. ಈಗ ದ್ವಿತಿಯ ವರದಿಯಲ್ಲಿ ಪೊಸಿಟಿವ್ ಇರುವುದು ಖಚಿತವಾಗಿದೆ ಎನ್ನಲಾಗುತ್ತಿದೆ. ಈಗಾಗಲೆ ಸ್ಥಳೀಯ ಆಡಳಿತದವರು ಸ್ಥಳಕ್ಕೆ ತೆರಳಿದ್ದು ವ್ಯಕ್ತಿಯನ್ನು ಕಾರವಾರಕ್ಕೆ ಕಳುಹಿಸುತ್ತಾರೆ ಮತ್ತು ಗ್ರಾಮವನ್ನು ಸೀಲ್ ಡೌನ್ ಮಾಡುತ್ತಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

About the author

Adyot

5 Comments

Leave a Comment