U19 ವಿಶ್ವಕಪ್ : ಭಾರತಕ್ಕೆ ಸೋಲು, ಬಾಂಗ್ಲಾ ಮಡಿಲಿಗೆ ವಿಶ್ವಕಪ್

ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ಸೌಥ್ ಆಫ್ರಿಕಾದ ಓವಲ್ ನಲ್ಲಿ ನಡೆದ 19 ವರ್ಷ ಒಳಗಿನ ವಯೋಮಿತಿಯ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹಾಲಿ ಚಾಂಪಿಯನ್ ಭಾರತ ತಂಡವನ್ನ ಸೋಲಿಸಿ ವಿಶ್ವಕಪ್ ನ ನೂತನ ಚಾಂಪಿಯನ್ ಪಟ್ಟ ಪಡೆಯಿತು.



ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಯಶಸ್ವಿ ಜೈಸ್ವಾಲ್(88) ಅವರ ಏಕಾಂಗಿ ಹೋರಾಟದ ನೆರವಿನಿಂದ 47.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 177 ರನ್ ಗಳಿಸಲಷ್ಟೇ ಶಕ್ತವಾಯಿತು. 178 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಮೊಹಮ್ಮದ್ ಹುಸೇನ್(47) ಹಾಗೂ ನಾಯಕ ಅಕ್ಬರ್ ಅಲಿ(43) ರನ್ ಗಳ ನೆರವಿನಿಂದ ಒಂದು ಹಂತದಲ್ಲಿ ಗೆಲುವಿನೆಡೆಗೆ ಸಾಗುತ್ತಿತ್ತು. ಆದರೆ ಪಂದ್ಯದ ಕೊನೆಯಲ್ಲಿ ಮಳೆಯಿಂದ ಅಡ್ಡಿಯಾದ ಕಾರಣದಿಂದ 46 ಓವರ್ ಗಳಿಗೆ 170 ರನ್ ಗುರಿಯ ಹೊಸ ಟಾರ್ಗೆಟ್ ನೀಡಲಾಯಿತು. ಬಾಂಗ್ಲಾದೇಶ ತಂಡ 42.1 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಯಗಳಿಸಿ ವಿಶ್ವಕಪ್ ಗೆ ಹೊಸ ಸಾಮ್ರಾಟನಾಗಿ ಹೊರಹೊಮ್ಮಿತು.

About the author

Adyot

Leave a Comment