U19 ವಿಶ್ವಕಪ್ ಕ್ರಿಕೆಟ್ : ಶುಭಾರಂಭ ಮಾಡಿದ ಭಾರತ ತಂಡ

ಓವಲ್ : ಸೌಥ್ ಆಫ್ರಿಕಾದ ಓವಲ್ ಕ್ರೀಡಾಂಗಣದಲ್ಲಿ ನಡೆದ 19 ವರ್ಷ ಒಳಗಿನ ವಯೋಮಿತಿಯ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 90 ರನ್ ಗಳ ಭರ್ಜರಿ ಜಯ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 297 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್, ನಾಯಕ ಪ್ರಿಯಮ್ ಗಾರ್ಗ್ ಹಾಗೂ ಧ್ರುವ ಚಾಂದ್ ತಂಡಕ್ಕೆ ತಲಾ ಅರ್ಧಶತಕದ ಕಾಣಿಕೆ ನೀಡಿದರು. 298 ರನ್ ಗಳ ಬೃಹತ್ ಮೊತ್ತವನ್ನ ಬೆನ್ನತ್ತಿದ ಶ್ರೀಲಂಕಾ ತಂಡ 45.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ ಸೋಲನ್ನೊಪ್ಪಿಕೊಂಡಿತು. ಪಂದ್ಯ ಗೆಲ್ಲುವುದರೊಂದಿಗೆ ಭಾರತ ತಂಡ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿತು.

About the author

Adyot

Leave a Comment