U19 ವಿಶ್ವಕಪ್ : ಭಾರತಕ್ಕೆ ಶರಣಾದ ನ್ಯೂಜಿಲೆಂಡ್

ಸೌಥ್ ಆಫ್ರಿಕಾ : ಸೌಥ್ ಆಫ್ರಿಕಾದ ಓವಲ್ ನಲ್ಲಿ ನಡೆಯುತ್ತಿರೋ 19 ವರ್ಷ ಒಳಗಿನ ವಯೋಮಿತಿಯ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನ ಸೋಲಿಸಿದೆ.

ಮಳೆಯಿಂದಾಗಿ ಬಾಧಿತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 23 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 115 ರನ್ ಗಳಿಸಿತ್ತು. ಜೈಸ್ವಾಲ್ 57 ಹಾಗೂ ಸಕ್ಸೇನಾ 52 ರನ್ ಗಳಿಸಿ ಆಡುತ್ತಿದ್ದರು. ಆಗ ಆರಂಭವಾದ ಮಳೆಯಿಂದಾಗಿ ಆಟವನ್ನ ನಿಲ್ಲಿಸಲಾಯಿತು. ಸುಮಾರು 3 ಗಂಟೆಗಳ ಕಾಲ ಸುರಿದ ಮಳೆಯ ಬಿಡುವಿನ ನಂತರ ಪಂದ್ಯವನ್ನ 23 ಓವರ್ ಗಳಿಗೆ ನಿಗದಿಗೊಳಿಸಿ ಡಕ್ವರ್ಥ್ ನಿಯಮದಂತೆ ನ್ಯೂಜಿಲೆಂಡ್ ತಂಡಕ್ಕೆ 192 ರನ್ ಗಳ ಗುರಿ ನೀಡಲಾಯಿತು. ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ ರವಿ ಬಿಶ್ನೋಯ್ ದಾಳಿಗೆ ತತ್ತರಿಸಿ 21 ಓವರ್ ಗಳಲ್ಲಿ 147 ರನ್ ಗಳಿಗೆ ಸರ್ವಪತನ ಕಂಡಿತು. ಇದರಿಂದಾಗಿ ಭಾರತ ತಂಡ 44 ರನ್ ಗಳ ಜಯಗಳಿಸಿತು.

About the author

Adyot

Leave a Comment