ಕುಮಟಾ : ಶಾಲೆಯಿಂದ ಮನೆಗೆ ತೆರಳುವ ಗಡಿಬಿಡಿಯಲ್ಲಿ ಶಾಲಾ ಕೊಠಡಿಯ ಒಳಗೆ ಹೊಕ್ಕಿದ್ದ ಹಸುವನ್ನು ಎರಡು ದಿನ ಶಿಕ್ಷಕರು ಕೊಠಡಿಯಲ್ಲಿ ಕೂಡಿ ಹಾಕಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶನಿವಾರದ ದಿನ ಶಾಲೆಯ ಒಳಗೆ ದನ ಹೊಕ್ಕಿತ್ತು. ಆದರೆ ಇದನ್ನು ಗಮನಿಸದ ಶಿಕ್ಷಕರು ಹಾಗೆಯೇ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು ಹಸು ಎರಡು ದಿನ ಬಂಧಿಯಾಗಿದೆ. ಹಸುವಿಗೆ ಆಹಾರವಿಲ್ಲದೇ ಹಸಿವಿನಿಂದ ಇಂದು ಗೀಳಿಟ್ಟಿದ್ದು, ಅಕ್ಕಪಕ್ಕದ ಜನರಿಗೆ ತಿಳಿದು ಕೊಠಡಿ ನೋಡಿದಾಗ ಹಸು ಇರುವುದು ಪತ್ತೆಯಾಯಿತು.
ನಂತರ ಇಂದು ಹಸುವಿಗೆ ಕೊಠಡಿಯಿಂದ ಮುಕ್ತಿ ನೀಡಲಾಗಿದ್ದು ಶಿಕ್ಷಕರ ನಿರ್ಲಕ್ಷದ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದು ಶಿಕ್ಷಕರು ಮನೆಗೆ ಹೋಗುವ ಗಡಿಬಿಡಿಯಲ್ಲಿ ಹಸು ಬಂದಿರುವುದನ್ನೂ ನೋಡದೇ ಬೀಗ ಹಾಕಿ ಹೋಗಿದ್ದಾರೆ. ಒಂದುವೇಳೆ ಇದೇ ಕೊಠಡಿಯಲ್ಲಿ ಮಕ್ಕಳಿದ್ದಿದ್ದರೇ ಏನು ಗತಿ ಎಂದು ಶಿಕ್ಷಕರ ನಿರ್ಲಕ್ಷಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.