ಆದ್ಯೋತ್ ನ್ಯೂಸ್ ಡೆಸ್ಕ್ : ಜಮಾತ್ ಸಭೆಯಲ್ಲಿ ಪಾಲ್ಗೊಂಡ ಉತ್ತರ ಕನ್ನಡ ಜಿಲ್ಲೆಯ 8 ಜನರನ್ನ ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಿಂದ 8 ಜನ ದೆಹಲಿಯ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನ ಗುರುತಿಸಿ ಈಗಾಗಲೇ ಹೋಮ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಜಿಲ್ಲೆಯ ಜನರು ಈತರದ ಯಾವುದಾದರೂ ಸಭೆಗೆ ಹೋಗಿದ್ದಲ್ಲಿ ದಯವಿಟ್ಟು ತಾವೇ ಮುಂದಾಗಿ ಬಂದು ಮಾಹಿತಿ ನೀಡಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ ಮುಖ್ಯವಾದ 10 ಕೇಸ್ ಗಳನ್ನ ದಾಖಲಿಸಲಾಗಿದೆ. ದಾಂಡೇಲಿಯಲ್ಲಿ ಫೇಕ್ ನ್ಯೂಸ್ ಹರಡಿದ್ದರ ಬಗ್ಗೆ, ಭಟ್ಕಳ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಓಡಾಡುವರ ಮೇಲೆ ಹಾಗೂ ಹಳಿಯಾಳದ 2 ಕಡೆ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ 22 ಜನರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದರು. ಯಾವುದೇ ಕಾರಣಕ್ಕೂ ನಿಯಮಗಳನ್ನ ಉಲ್ಲಂಘಿಸಿ ಪ್ರಾರ್ಥನೆ ನಡೆಸುವುದನ್ನ ನಿಲ್ಲಿಸಿ, ಅನಗತ್ಯವಾಗಿ ಓಡಾಡಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
,😷😷