ದಯವಿಟ್ಟು ಲಸಿಕೆ ತೆಗೆದುಕೊಳ್ಳಿ : ಡಿಸಿ ಮನವಿ

ಹೊನ್ನಾವರ : ಮಂಗನಕಾಯಿಲೆಗೆ ಜಿಲ್ಲೆಯ ಸಿದ್ದಾಪುರದ ವ್ಯಕ್ತಿಯೋರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.


ಜಿಲ್ಲೆಯ ಮುರ್ಡೇಶ್ವರದಲ್ಲಿ ಸ್ಕೂಬಾ ಡೈವಿಂಗ್ ಉತ್ಸವದಲ್ಲಿ ಪಾಲ್ಗೊಂಡು ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಮೃತಪಟ್ಟ ವ್ಯಕ್ತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ಅವರಿಗೆ ಮಂಗನಕಾಯಿಲೆ ಇರೋ ಬಗ್ಗೆ ದೃಢಪಟ್ಟಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ವರದಿ ಪಡೆಯಲಾಗುವುದು. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡೋ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಾಗುವುದು ಎಂದರು. ಮಂಗನಕಾಯಿಲೆ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನ ನಡೆಸುತ್ತಿದ್ದು, ದಯವಿಟ್ಟು ಸಾರ್ವಜನಿಕರು ಲಸಿಕೆ ತೆಗೆದುಕೊಳ್ಳಬೇಕು. ಲಸಿಕೆಗೆ ಯಾವುದೇ ಕಾರಣಕ್ಕೂ ಹೆದರಬೇಡಿ. ಈ ಬಗ್ಗೆ ಈಗಾಗಲೇ ಸಾಕಷ್ಟು ಜನರನ್ನ ಎಚ್ಚರಿಸೋ ಕಾರ್ಯ ಮಾಡ್ತಿದ್ದೇವೆ. ಸಾರ್ವಜನಿಕರು ದಯವಿಟ್ಟು ಇದಕ್ಕೆ ಸ್ಪಂದಿಸಿ ಲಸಿಕೆ ಪಡೆಯಬೇಕು ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿದರು.

About the author

Adyot

Leave a Comment