ನೆಲೆಮಾವ್ ದಲ್ಲಿ ವಿಶ್ವ ಹಿಂದೂ ಪರಿಷತ್ ಪರಿಚಯ ವರ್ಗ

ಸಿದ್ದಾಪುರ : ಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಪರಿಚಯ ವರ್ಗವು ನಡೆಯಿತು. ವರ್ಗದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮತ್ತು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಗಂಗಾಧರ ಹೆಗಡೆ ಕಡಕಿನಬೈಲ್ ವಿಶ್ವ ಹಿಂದೂ ಪರಿಷತ್ ಬೆಳೆದು ಬಂದ ಹಾದಿ, ಸಂಘಟನೆ, ಕಾರ್ಯಕ್ರಮ, ಅಭಿಯಾನಗಳು ಹಾಗೂ ಹೋರಾಟಗಳ ಕುರಿತು ಹೇರೂರು ಭಾಗದ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.


ವರ್ಗದಲ್ಲಿ ವಿಹಿಂಪ ಪ್ರಾಂತ ಉಪಾಧ್ಯಕ್ಷರಾದ ಗಂಗಾಧರ ಹೆಗಡೆ ಕಡಕಿನಬೈಲ್ ನೂತನವಾಗಿ ಹೇರೂರು ಹೋಬಳಿಯ ಜವಾಬ್ದಾರಿಗಳನ್ನು ಘೋಷಣೆ ಮಾಡಿದರು. ಸುಧಾಕರ ಹೆಗಡೆ ಬಿಳೆಕಲ್ ಅವರು ಅಧ್ಯಕ್ಷರಾಗಿ, ವಿನಾಯಕ ಭಟ್ ನೆಲೆಮಾಂವ್ ಅವರು ಕಾರ್ಯದರ್ಶಿಯಾಗಿ, ಸದಸ್ಯರಾಗಿ ಚಂದ್ರಶೇಖರ ಭಟ್ ನೆಲೆಮಾಂವ್, ಲಕ್ಷ್ಮಣ ಡೊಂಬೆ, ಅಣ್ಣಪ್ಪ ಗೌಡ ಅತ್ತೀಮರುಡು, ರಾಜೀವ ಹೆಗಡೆ ಲಕ್ಕೀಸವಲು, ಜಿ ಟಿ ಭಟ್ ಏಳಗದ್ದೆ, ಭಜರಂಗ ದಳದ ಸಂಯೋಜಕರಾಗಿ ಶ್ಯಾಮಸುಂದರ ನಾಯ್ಕ, ಮತ್ತು ಮಾತೃಶಕ್ತಿ ಪ್ರಮುಖರಾಗಿ ಪಾರ್ವತಿ ಭಟ್ ಯಲೂಗಾರು ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಅರೇಕಟ್ಟಾ, ಜಿಲ್ಲಾ ಸಹ ಕಾರ್ಯದರ್ಶಿ ಗಣಪತಿ ಭಟ್ ಹರಿಮನೆ, ಕೇಶವ ಮರಾಠೆ ಉಪಸ್ಥಿತರಿದ್ದರು.

About the author

Adyot

Leave a Comment