ವಿ.ಐ.ಎಸ್.ಐ.ಎಲ್ ಪುನಶ್ಚೇತನ ಮಾಡಿ, ಕೇಂದ್ರ ಸಚಿವರಿಗೆ ಬಿ.ಎಸ್.ವೈ ಮನವಿ

ನವದೆಹಲಿ : ಸಿ.ಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಉಕ್ಕು ಮತ್ತು ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರದಾನ್ ಅವರನ್ನು ಭೇಟಿ ಮಾಡಿ ಭದ್ರಾವತಿಯ ವಿಐಎಸ್ಎಲ್ ಬಗ್ಗೆ ಜೊತೆ ಚರ್ಚೆ ನಡೆಸಿ, ವಿಐಎಸ್ಎಲ್ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನ ನಿಲ್ಲಿಸುವಂತೆ ಮನವಿ ಮಾಡಿದರು.

ವಿಐಎಸ್ಎಲ್ ಬಗ್ಗೆ ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ಜನತೆಗೆ ಭಾವನಾತ್ಮಕ ಸಂಬಂಧವಿದೆ. ನೀತಿ ಆಯೋಗದ ಸಲಹೆಯಂತೆ ಬಂಡಾವಳ ಹಿಂತೆಗೆತಕ್ಕೆ ಚಾಲನೆ ನೀಡಲಾಗಿದೆ ಆದರೆ ಈವರೆಗೂ ಯಾವುದೇ ಖಾಸಗಿ ಬಂಡವಾಳಗಾರರು ಈ ಬಗ್ಗೆ ಒಲವು ತೋರಿಲ್ಲ. ಈ ವಿಐಎಸ್ಎಲ್ ಉತ್ಪಾದಿಸುವ ಉಕ್ಕು ಉತ್ಕೃಷ್ಟ ಗುಣಮಟ್ಟದ ಕಬ್ಬಿಣವಾಗಿದ್ದು ದೇಶದಲ್ಲಿಯೇ ಹೆಸುರುವಾಸಿಯಾಗಿದೆ. ಹೀಗಾಗಿ ಬಂಡವಾಳ ಹಿಂತೆಗೆತವನ್ನು ಕೈಬಿಟ್ಟು ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗಬೇಕು ಅಂತ ಸಿ.ಎಂ ಹಾಗೂ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಲ್ಲಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

About the author

Adyot

Leave a Comment