ನಮ್ಮ ಜೀವನ ಕ್ರಮದಲ್ಲಿ ದೈಹಿಕ ಶಿಸ್ತಿಗೆ ಪ್ರಾಮುಖ್ಯತೆ ನೀಡ ಬೇಕು. ನಮ್ಮ ದೈಹಿಕ ಆರೋಗ್ಯ ಮತ್ತು ಸಮಾಜದಲ್ಲಿ ನಮ್ಮ ಸ್ಥಾನ-ಮಾನಗಳು ನಮ್ಮ ದೈಹಿಕ ಶಿಸ್ತನ್ನು ಕೇಳುತ್ತವೆ.
ಬೆಳಿಗ್ಗೆ ನಾವು ಮಾಡುವ ಬ್ರಷ್, ಸ್ನಾನ ಈಡೀ ದಿನ ನಮ್ಮನ್ನು ಲವಲವಿಕೆಯಿಂದ ಇಡುವುದಲ್ಲದೆ ನಮ್ಮ ಸಹೊದ್ಯೋಗಿಗಳು ನಮ್ಮ ಜೊತೆ ಬೆರೆಯುವಂತೆ ಮಾಡುತ್ತವೆ. ಉದಾ: ನಾವು ಸರಿಯಾಗಿ ಬ್ರಷ್ ಮಾಡಿರುವುದಿಲ್ಲ. ಬಾಯಿಂದ ವಾಸನೆ ಬರುತ್ತಿರುತ್ತದೆ. ಆಗ ನಮ್ಮ ಜೊತೆ ಮಾತನಾಡುವವರು ಅಂತರ ಕಾಪಾಡುತ್ತಾರೆ. ಅವರ ಧ್ವನಿ ಸಣ್ಣದಾಗಿದ್ದರೆ ಅವರು ಹೇಳುವುದು ನಮಗೆ ಕೇಳುವುದಿಲ್ಲ. ಹತ್ತಿರ ಹೋಗಲು ಅವರು ಬಿಡುವುದಿಲ್ಲ.
ಇನ್ನು ನಾವು ಧರಿಸುವ ಬಟ್ಟೆ. ಇಂದು ಯಾವುದೇ ಉದ್ಯೋಗ ಮಾಡಲಿ ಅಲ್ಲಿ ಬಟ್ಟೆಗೆ ಪ್ರಾಮುಖ್ಯತೆ ಇರುತ್ತದೆ. ವಸ್ತ್ರ ಸಂಹಿತೆ ಎಲ್ಲಾ ಕಡೆಯಲ್ಲೂ ಇದೆ. ಅಲ್ಲದೆ ಬಟ್ಟೆ ಎನ್ನುವುದು ಕೇವಲ ಮಾನ ಮುಚ್ಚುವ ಸರಕಾಗಿ ಇಂದು ಇಲ್ಲ. ಹಿಂದೆ ಗಾಂಧೀಜಿಯಂತಹವರು ಕನಿಷ್ಠ ಬಟ್ಟೆ ಧರಿಸಿಯೂ ಮಹಾತ್ಮರೆನಿಸಿದರು. ಆದರೆ ಈಗ ಕಾಲ ಬದಲಾಗಿದೆ, ಮಠಮಾನ್ಯಾಧೀಶರು ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ಧರಿಸುತ್ತಾರೆ. ಹೀಗಾಗಿ ಬಟ್ಟೆ ಎನ್ನುವುದು ನಮ್ಮ ಗುರುತಿಗೆ ಅವಶ್ಯಕವಾಗಿದೆ. ಕಡಿಮೆ ಮೌಲ್ಯದ ಬಟ್ಟೆಯಾದರೂ ಚಿಂತೆ ಇಲ್ಲ ಅದು ನಮಗೆ ಒಪ್ಪುವಂತಿರಬೇಕು, ಒಪ್ಪವಾಗಿರಬೇಕು. ನೀವು ನಿಮ್ಮ ಉದ್ಯೋಗದ ಸ್ಥಳಕ್ಕೆ ಹೋಗುತ್ತಿರಿ ಅಲ್ಲಿ ಗಮನ ಸೆಳೆಯುವುದು ನಿಮ್ಮ ಬಟ್ಟೆ. ಅದರ ಗುಂಡಿಗಳು ಸರಿಯಾಗಿದೆಯೇ, ಹರಿದ ಭಾಗ ಕಾಣಿಸುವಂತಿದೆಯೇ, ಪುರುಷರಾದರೆ ಪ್ಯಾಂಟ್ ನ ಜಿಪ್ ಹಾಕಿದ್ದೇವೆಯೇ? ಮಹಿಳೆಯರಾದರೆ ಬ್ಲೌಸ್ ನ ಆಚೆಗೆ ಬ್ರಾ ಇಣುಕುತ್ತಿದೆಯೇ? ಇವೆಲ್ಲವನ್ನು ಗಮನಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ.
(ಮುಂದುವರಿಯುವುದು)
***** ***** ***** ***** ***** *****
ಅಖಂಡ ಸ್ವರೂಪನಾದ, ಜ್ಞಾನರೂಪನಾದ, ಸಮುದ್ರದಂತೆ ಆಕ್ಷುಬ್ಧನಾಗಿಯೂ, ಪ್ರಶಾಂತನಾಗಿಯೂ ಇರುವ ಏಕಮೇವಾದ್ವಿತೀಯನಾದ ಆನಂದ ಘನ ಸ್ವರೂಪದಿಂದ ಬೆಳಗುತ್ತ, ಅಹಂಕಾರವನ್ನು ಘಾಸಿಸುತ್ತ, ಪ್ರಕಾಶಮಾನವಾದ ಪರಬ್ರಹ್ಮವು ಜಗತ್ತನ್ನು ಬೆಳಗುತ್ತಿದೆ. ಜೀವಾಭಿನ್ನವಾದ ಆ ವಸ್ತುವಿಗೆ ಉಚ್ಚ-ಕನಿಷ್ಠ ದ ಭೇದವಿಲ್ಲ- ಶ್ರೀ ಶ್ರೀಧರಸ್ವಾಮಿ ಮಹಾರಾಜ
***** **** ***** ***** ***** ***** *****
ವಾರ ಭವಿಷ್ಯ- 09-02-2020 ರಿಂದ 15-02–2020ರವರೆಗೆ
ಮೇಷ: ವಾರದ ಆರಂಭದಲ್ಲಿ ನಿರೀಕ್ಷಿಸಿದ ಕೆಲಸ ಕೈಗೂಡದಿದ್ದರೂ ಅಂತ್ಯದಲ್ಲಿ ಕೈಗೂಡಲಿದೆ. ಸಾಲ ತೆಗೆದುಕೊಳ್ಳುವಾಗ ಎಚ್ಚರವಿರಲಿ. ಮಾನಸಿಕ ಕ್ಷೋಭೆ ಸಾಧ್ಯತೆ ಇರುವುದರಿಂದ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಿ.
ವೃಷಭ: ಆರ್ಥಿಕ ತೊಂದರೆಯ ಜೊತೆಗೆ ದೈಹಿಕ ತೊಂದರೆಯಾಗಲಿದೆ. ವಾಹನ ಓಡಾಟದಲ್ಲಿ ಎಚ್ಚರಿಕೆ ಇರಲಿ. ಯಾವುದೇ ಹೊಸ ಉದ್ಯೋಗದ ಪ್ರಾರಂಭ ಬೇಡ. ಶ್ರೀದೇವಿ ಆರಾಧನೆ ಮಾಡುವುದು ಒಳ್ಳೆಯದು.
ಮಿಥುನ: ಬೆಂಕಿ ಮತ್ತು ವಾಹನದಿಂದ ಅಪಾಯವಾಗುವ ಸಾಧ್ಯತೆ ಇದೆ. ಹಣಕಾಸಿನ ತೊಂದರೆ ಇಲ್ಲ. ಹೊಸ ಬಟ್ಟೆ ಖರೀದಿಸಲಿದ್ದೀರಿ. ಜೊತೆಗೆ ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ.
ಕರ್ಕಾಟಕ: ನಿರಾಳವಾಗಿರುವ ವಾರ. ಮನೋರಂಜನೆ, ಪ್ರವಾಸ ಮಾಡಲು ಸೂಕ್ತ ಕಾಲ, ಹೊಸ ವ್ಯವಹಾರಕ್ಕೆ ಅನುಕೂಲಕರ ವಾತಾವರಣ.
ಸಿಂಹ: ಹೊಸ ಯೋಜನೆಯೊಂದಿಗೆ ಕಾರ್ಯಪ್ರವತ್ತರಾಗಿ. ಮೇಲಾಧಿಕಾರಿಗಳ ವಿಶ್ವಾಸ ದೊರೆಯಲಿದೆ. ವ್ಯಾಪಾರಿಗಳಿಗೆ ಧಾನ್ಯ ವ್ಯಾಪಾರದಿಂದ ಉತ್ತಮ ಲಾಭವಿದೆ. ಉನ್ನತ ವ್ಯಾಸಂಗ ಪ್ರಾರಂಭಿಸಲು ಉತ್ತಮ ವಾತಾವರಣ.
ಕನ್ಯಾ: ಮಾನಸಿಕ ಕ್ಷೋಭೆಯಿಂದ ಬಳಲುವ ಸಾಧ್ಯತೆ. ಉಸಿರಾಟದ ತೊಂದರೆ, ನರ ಸಂಬಂಧಿತ ಬಾಧೆಗಳು ಕಾಡಲಿವೆ. ಹಣಕಾಸಿನ ಕೊರತೆಯಾಗುವುದಿಲ್ಲ.
ತುಲಾ: ಆರ್ಥಿಕ ಸಂಕಷ್ಟದಿಂದ ಬಳಲಲಿದ್ದೀರಿ. ನಂಬಿದವರು ಮೋಸ ಮಾಡಲಿದ್ದಾರೆ. ದೈಹಿಕ ಶ್ರಮದ ಕೆಲಸ ಮಾಡುವಾಗ ಎಚ್ಚರವಿರಲಿ. ಮಂಗಳವಾರ ಮತ್ತು ಶುಕ್ರವಾರ ಶ್ರೀರಾಜರಾಜೇಶ್ವರಿ ಅಷ್ಟಕವನ್ನು ಪಠಿಸುವುದು ಒಳ್ಳೆಯದು.
ವೃಶ್ಚಿಕ: ವೈವಾಹಿಕ ಪ್ರಸ್ತಾಪ ಬಂದರೂ ದುಡುಕುವುದು ಬೇಡ .ನಿಮ್ಮ ಮನೋಕಾಮನೆಗಳು ಈಡೇರಲಿದೆ. ಉನ್ನತ ವ್ಯಾಸಂಗ ಪ್ರಾರಂಭಿಸುವವರಿಗೆ ಸಕಾಲ. ಹಣವಿದೆ ಎಂದು ದುಂದುವೆಚ್ಚ ಮಾಡಬೇಡಿ.
ಧನಸ್ಸು: ಹಣಕಾಸಿನ ಮುಗ್ಗಟ್ಟಿನ ಜೊತೆಗೆ ಮಾನಸಿಕ ಕಿರಿಕಿರಿಯಾಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ತೊಂದರೆಯಾಗಲಿದೆ. ತಾಳ್ಮೆ ಕಳೆದುಕೊಂಡರೆ ಸಂಕಷ್ಟಕ್ಕೆ ಸಿಲುಕುವಿರಿ. ಶ್ರೀ ಶನೇಶ್ಚರ ಮೂಲ ಮಂತ್ರವನ್ನು108 ಬಾರಿ ಪಠಿಸುವುದು ಒಳ್ಳೆಯದು.
ಮಕರ: ಉದರಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲಲಿದ್ದೀರಿ. ಹೊಸ ಯೋಜನೆಗಳಿಗೆ ಸಕಾಲವಲ್ಲ. ಹಾಸಿಗೆ ಇದ್ದಷ್ಟೆ ಕಾಲು ಚಾಚಿ. ಮುಂದೆ ಆರ್ಥಿಕ ಸಂಕಷ್ಟ ಬರಲಿದೆ. ಹನುಮಾನ್ ಚಾಲೀಸ್ ಪಠಿಸಿದರೆ ಒಳ್ಳೆಯದು.
ಕುಂಭ: ಮನಸ್ಸು ನಿಮ್ಮ ನಿಯಂತ್ರಣದಲ್ಲಿಲ್ಲ. ಬೇಡದ ವಿಷಯಗಳು ನಿಮ್ಮನ್ನು ಸುತ್ತುವರಿದು ವೃಥಾ ಅಪವಾದಕ್ಕೆ ಸಿಲುಕಲಿರುವಿರಿ. ಮಾತಿನಲ್ಲಿ ಹಿಡಿತವಿರಲಿ. ಆರ್ಥಿಕ ತೊಂದರೆ ಎದುರಾಗದಿದ್ದರೂ ಖರ್ಚು ವಿಪರೀತವಾಗಲಿದೆ.
ಮೀನ: ನಿಮ್ಮ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಅದೃಷ್ಠವಂತರಾಗುವಿರಿ. ಬಹುಕಾಲದಿಂದ ಬಗೆಹರಿಯದ ಸಮಸ್ಯೆಯೊಂದು ಸುಲಭವಾಗಿ ಬಗೆಹರಿಯಲಿದೆ.
**** *** ***** ಶುಭಂ **** *** *****
ಸಂಪರ್ಕಿಸಿ : 9449454044
Nice words