ಕಣ್ಣಿಗೆ ಕಾಣುವ ವಸ್ತುಗಳೆಲ್ಲವೂ ಜಡವಾಗಿರುವುದರಿಂದ ಸ್ವತಃ ಕಾಣಲಾರವು. ಅವುಗಳನ್ನು ಬೆಳಗುವ ಪ್ರಕಾಶವೇ ಆತ್ಮವಾಗಿರುತ್ತದೆ. ಅವನೇ ಸಚ್ಚಿದಾನಂದ ಪರಮಾತ್ಮ – ಶ್ರೀ ಶ್ರೀಧರ ಸ್ವಾಮಿ ಮಹಾರಾಜ
**** **** **** **** **** **** **** ****
ಮೇಷ: ವಾರದ ಆರಂಭದಲ್ಲಿ ಪ್ರಾರಂಭವಾಗುವ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ತಲೆ ನೋವು ಹಾಗೂ ಸೊಂಟ ನೋವು ಬಾಧಿಸುವ ಸಾಧ್ಯತೆಗಳಿವೆ. ಹಣಕಾಸಿನ ವ್ಯವಹಾರದಲ್ಲಿ ಗೆಲುವು ಸಿಗಲಿದೆ.
ವೃಷಭ: ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ಮನಸ್ತಾಪಗಳು ಉಂಟಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ವಾಹನ-ಬೆಂಕಿಯಿಂದ ಎಚ್ಚರವಿರಬೇಕು. ಮೃತ್ಯುಂಜಯ ಜಪ ಪಠಿಸುವುದು ಉತ್ತಮ.
ಮಿಥುನ: ಹಣಕಾಸಿನ ವ್ಯವಹಾರ ಉತ್ತಮವಾಗಿ ನಡೆಯುವ ಈ ವಾರ ದೈಹಿಕ ತೊಂದರೆಗೆ ಒಳಗಾಗಲಿರುವಿರಿ. ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಸಂಪರ್ಕಿಸಿ. ಕಪ್ಪು ಆಕಳಿಗೆ ನವಧಾನ್ಯ ತಿನ್ನಿಸುವುದು ಒಳ್ಳೆಯದು.
ಕರ್ಕಾಟಕ: ಹಿತಶತ್ರುಗಳ ಕಾಟವಿದ್ದರೂ ಕೆಲಸ- ಕಾರ್ಯಗಳಲ್ಲಿ ಜಯ ನಿಮ್ಮದಾಗಲಿದೆ. ಬಹುದಿನದಿಂದ ಬಾಕಿ ಇರುವ ಪ್ರಮುಖ ಕೆಲಸಗಳಿದ್ದರೆ ಮುಗಿಸಿಕೊಳ್ಳಲು ಸೂಕ್ತ ಕಾಲ. ಹೊಸ ವಸ್ತುಗಳ ಖರೀದಿಯಾಗಲಿದೆ.
ಸಿಂಹ: ಶೇರು ವ್ಯವಹಾರದಲ್ಲಿ ಗೆಲುವು ಸಿಗಲಿದೆ. ಅನಿರೀಕ್ಷಿತವಾಗಿ ಧನ ಸಿಗಲಿದ್ದು, ಹೊಸ ವ್ಯವಹಾರಗಳಿಗೆ ತೊಡಗಿಸಿಕೊಳ್ಳಬಹುದು. ನೌಕರರಿಗೆ ಬಡ್ತಿ ಹೊಂದುವ ಅವಕಾಶವಿದೆ. ವಿವಾಹ ವಿಷಯದ ಪ್ರಸ್ತಾಪ ಮಾಡಬಹುದು.
ಕನ್ಯಾ: ಕಾರ್ಯ ಪ್ರಾರಂಭ ಮಾಡುವುದಕ್ಕೆ ಸಕಾಲವಲ್ಲ. ಪ್ರತಿಯೊಂದು ಕೆಲಸವನ್ನು ಯೋಚಿಸಿ ಮಾಡಿ. ಹಣಕಾಸಿನ ವ್ಯವಹಾರದಲ್ಲಿ ಯಾರನ್ನೂ ನಂಬಬೇಡಿ. ಹೊಸ ವಸ್ತುಗಳ ಖರೀದಿಯಿಂದ ಮನೆಯಲ್ಲಿ ಸಂತೋಷದ ವಾತಾವರಣವಿದ್ದರೂ ಆರ್ಥಿಕ ಸಮಸ್ಯೆ ಎದುರಾಗಲಿದೆ.
ತುಲಾ: ಕುಟುಂಬ ನಿರ್ವಹಣೆಯಲ್ಲಿ ವಿಪರೀತ ಖರ್ಚು ಬರಲಿದೆ. ಸ್ನೇಹಿತರ ಸಹಕಾರದಿಂದ ವ್ಯವಹಾರ ಸುರಳೀತವಾಗಿ ನಡೆಯಲಿದೆ. ಖರ್ಚಿಗೆ ಕಡಿವಾಣ ಹಾಕದಿದ್ದರೆ ಬರುವ ದಿನದಲ್ಲಿ ತೊಂದರೆ ಎದುರಾಗಲಿದೆ. ಶ್ರೀ ವಿನಾಯಕನ ಆರಾಧನೆ ಮಾಡುವುದು ಒಳ್ಳೆಯದು.
ವೃಶ್ಚಿಕ: ಆರೋಗ್ಯದಲ್ಲಿ ಏರು-ಪೇರಾಗಲಿದೆ. ಉದ್ಯೋಗ ಸುಲಭವಾಗಿ ಸಿಗಲಿದ್ದು ಪದೋನ್ನತಿ ಹೊಂದಲಿದ್ದೀರಿ. ನಿರೀಕ್ಷಿತ ಫಲ ದೊರಕುವುದಲ್ಲದೆ ಹೇರಳ ಧನಲಾಭವಾಗಲಿದೆ.
ಧನಸ್ಸು: ಹಣಕಾಸಿನ ದುಂದುವೆಚ್ಚದ ಜೊತೆಗೆ ಅಪಘಾತಗಳು ಆಗುವ ಸಾಧ್ಯತೆ ಇದೆ. ಹಳೆಯ ವ್ಯಾಧಿಗಳು ಮರಕಳಿಸುವುದಲ್ಲದೆ ಆಸ್ಪತ್ರೆಗೆ ಸೇರುವ ಪ್ರಸಂಗವೂ ಬರಬಹುದು. ಉನ್ನತ ವ್ಯಾಸಂಗ ಮಾಡುವವರು ಪೂರ್ವ ತಯಾರಿ ಮಾಡಿಕೊಳ್ಳಲು ಸಕಾಲ.
ಮಕರ: ಶತ್ರುಗಳ ಕಾಟದಿಂದ ಬಸವಳಿಯಲಿದ್ದೀರಿ. ಮಿತ್ರರು ಶತ್ರುಗಳಾಗಿ ಕೆಲಸ-ಕಾರ್ಯಗಳಲ್ಲಿ ಅಡ್ಡಿ ಮಾಡಲಿದ್ದಾರೆ. ಹೊಸ ಕೆಲಸ ಪ್ರಾರಂಭಿಸಲು ಸಕಾಲವಲ್ಲ. ಹೊಟ್ಟೆ ನೋವು ಎಡಬಿಡದೆ ಕಾಡಲಿದೆ. ದಶರಥ ಕೃತ ಶನೇಶ್ಚರ ಸ್ತ್ರೋತ್ರ ಪಠಿಸುವುದರ ಜೊತೆಗೆ ಕಪ್ಪು ಆಕಳಿಗೆ ನವಧಾನ್ಯ ತಿನ್ನಿಸಿ ಪ್ರದಕ್ಷಿಣ ನಮಸ್ಕಾರ ಮಾಡುವುದು ಒಳ್ಳೆಯದು.
ಕುಂಭ: ಗೊಂದಲದಿಂದಲೇ ಪ್ರಾರಂಭವಾಗುವ ವಾರ ಮಾನಸಿಕ ಅಶಾಂತಿಯನ್ನು ಉಂಟು ಮಾಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಶತ್ರುಗಳನ್ನು ಕಟ್ಟಿಕೊಳ್ಳಲಿದ್ದೀರಿ. ದೂರದ ಪ್ರಯಾಣ, ಪ್ರವಾಸ ಒಳ್ಳೆಯದಲ್ಲ. ಶ್ರೀಶನೇಶ್ಚರ ಮೂಲ ಮಂತ್ರ ಜಪವನ್ನು ಪಠಿಸುವುದು ಒಳ್ಳೆಯದು.
ಮೀನ: ಸಂತಸದಿಂದ ತುಂಬಿರುವ ವಾರವಾಗಲಿದೆ. ಹೊಸ ಸಂಬಂಧ ಕೌಟಂಬಿಕ ಜೀವನವನ್ನು ಭದ್ರಗೊಳಿಸಲಿದೆ. ಹಣಕಾಸಿನ ವ್ಯವಹಾರದಲ್ಲಿ ಗೆಲುವು ದೊರಕುವುದಲ್ಲದೆ ಹೊಸ ಉದ್ಯೋಗ ಪ್ರಾರಂಭವಾಗಲಿದೆ.
***** ***** ಶುಭಂ ***** *****
ಸಂಪರ್ಕ ಸಂಖ್ಯೆ – 9449454044