ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ
***** ***** ***** ***** ***** *****
ಮೇಷ: ಬಂಧುಗಳ ಭೇಟಿಯಿಂದ ಒಂದಿಷ್ಟು ಬಲಬಂದರೂ ಕೆಲಸಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಹಣಕಾಸಿನ ಹರಿವು ಹೆಚ್ಚಾಗಿದ್ದರೂ ದುಂದು ವೆಚ್ಚ ಹೆಚ್ಚಾಗಲಿದೆ. ವಾರದ ಕೊನೆಯ ಎರಡು ದಿನ ವ್ಯಾಪಾರದಲ್ಲಿ ಉನ್ನತಿ ಸಿಗಲಿದೆ. ಮುಂದಿನ ಭವಿಷ್ಯಕ್ಕೆ ಇದು ಸಹಕಾರಿಯಾಗಲಿದೆ.
ವೃಷಭ: ಗುರು ಕೃಪೆ ಇಲ್ಲದ ಕಾರಣ ಸಮಸ್ಯೆಗಳ ಸರಮಾಲೆ ಈ ವಾರ ನಿಮ್ಮನ್ನು ಕಾಡಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ದ್ರವ ಪದಾರ್ಥಗಳ ವ್ಯಾಪಾರದಿಂದ ಒಂದಿಷ್ಟು ಹಣ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಹಳೆಯ ಬಾಕಿ ಬರಲಿದೆ. ಬೆಂಕಿಯಿಂದ ಎಚ್ಚರಿಕೆಯಾಗಿರಬೇಕು. ಗುರು ಚರಿತ್ರ ಪಾರಾಯಣ ಒಳ್ಳೆಯದು ಮಾಡಲಿದೆ.
ಮಿಥುನ: ವಾಹನ ಮತ್ತು ಬೆಂಕಿ ನಿಮ್ಮ ಶತ್ರುಗಳಾಗಲಿರುವ ಈ ವಾರ ಪ್ರಯಾಣದಲ್ಲಿ ಎಚ್ಚರಿಕೆ ಇರಬೇಕು. ಹಣಕಾಸಿನ ವ್ಯವಹಾರ ಉತ್ತಮವಾಗಿರುತ್ತದೆ. ಆಹಾರ ಸೇವನೆಯಲ್ಲಿ ಎಚ್ಚರ ಅಗತ್ಯ. ಹೊಟ್ಟೆ ನೋವು ಕಾಡಲಿದೆ. ಸುಬ್ರಹ್ಮಣ್ಯ ಪೂಜೆ ಮಾಡಿಸುವುದು ಉತ್ತಮ
ಕರ್ಕಾಟಕ: ಉದ್ಯೋಗದಲ್ಲಿ ಮೇಲಾಧಿಕಾರಿಗಳ ಮಾತು ಕೇಳುವುದು ಉತ್ತಮ. ಅನಿರೀಕ್ಷಿತವಾಗಿ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿರುವ ಈ ವಾರ ಧಾನ್ಯ ವ್ಯಾಪಾರದಿಂದ ಲಾಭಗಳಿಕೆಯಾಗಲಿದೆ. ಬಂಧುಗಳ ಭೇಟಿಯಿಂದ ಹೊಸ ಸಂಬಂಧ ಸಿಗಲಿದೆ.
ಸಿಂಹ: ಮುಟ್ಟಿದ್ದೆಲ್ಲ ಚಿನ್ನವಾಗಲಿರುವುದರಿಂದ ಹೊಸ ವ್ಯವಹಾರ ಪ್ರಾರಂಭಿಸಲು ಸಕಾಲವಾಗಿರುತ್ತದೆ. ಉದ್ಯೋಗಸ್ಥರಿಗೆ ಮುಂಬಡ್ತಿ ದೊರಕುವುದಲ್ಲದೆ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸ ವಸ್ತ್ರ ಖರೀದಿಯ ಜೊತೆಗೆ ಚಿನ್ನದ ಖರೀದಿಯನ್ನೂ ಮಾಡಲಿದ್ದೀರಿ.
ಕನ್ಯಾ: ನೀವು ನಿರೀಕ್ಷಿಸಿದ ಮಟ್ಟದಲ್ಲಿ ನಿಮ್ಮ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಹಣಕಾಸಿನ ಪರಿಸ್ಥಿತಿ ಮಧ್ಯಮವಾಗಿರುತ್ತದೆ. ಹೊಸ ವ್ಯವಹಾರದ ಪ್ರಯತ್ನ ಬೇಡ. ಯಾವುದೇ ವಸ್ತುವಿನ ಖರೀದಿಗೆ ಮುಂದಾಗಬೇಡಿ. ಹಳೆಯ ಶತ್ರು ಒಬ್ಬ ನಿಮ್ಮನ್ನು ಕಾಡಲಿದ್ದಾನೆ ಎಚ್ಚರಿಕೆ ಅಗತ್ಯ. ರುದ್ರಪಾರಾಯಣ ಮಾಡಿಸುವ ಅವಶ್ಯಕತೆ ಇದೆ.
ತುಲಾ: ಹೊಟ್ಟೆ ನೋವು ಹಾಗೂ ಕಾಲು ನೋವಿನಿಂದ ಬಳಲುತ್ತೀರಿ. ಮನೆ ಮಂದಿಯ ಅಸಡ್ಡೆಯಿಂದ ಕ್ರೋಧ ಹೆಚ್ಚಾಗಲಿದೆ. ತಾಳ್ಮೆ ಕಳೆದುಕೊಂಡರೆ ಅನಾಹುತವಾಗಲಿದೆ. ಹಿರಿಯರ ಬುದ್ಧಿ ಮಾತು ಕೇಳಿದರೆ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಉದ್ಯೋಗದಲ್ಲಿರುವವರು ಮೇಲಾಧಿಕಾರಿಗಳ ವಿರುದ್ಧ ಹೋಗಬೇಡಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳ್ಳೆಯದು.
ವೃಶ್ಚಿಕ: ಬಹಳ ದಿನದಿಂದ ಮಾಡಬೇಕೆಂದಿರುವ ವ್ಯವಹಾರ ಪ್ರಾರಂಭಿಸಲು ಸಕಾಲ. ಹಿರಿಯರ ಮಾರ್ಗದರ್ಶನ ದೊರಕುವುದಲ್ಲದೆ ಹಣದ ಸಹಾಯ ಬರಲಿದೆ. ಉದ್ಯೋಗದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ. ಹೊಸವಸ್ತು ಖರೀದಿಸುವಿರಲ್ಲದೆ ನಿಮ್ಮ ಆತ್ಮೀಯರು ಉಡುಗೊರೆ ನೀಡಲಿದ್ದಾರೆ.
ಧನಸ್ಸು: ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಮಾನಸಿಕ ಕಿರಿಕಿರಿಯ ಜೊತೆಗೆ ಆರೋಗ್ಯದಲ್ಲೂ ತೊಂದರೆಯಾಗಲಿದೆ. ವೈದ್ಯರ ಸಲಹೆ ಪಡೆಯದಿದ್ದರೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ. ಕಚೇರಿಯಲ್ಲಿ ಸಹೊದ್ಯೋಗಿಗಳ ಅಸಹಕಾರದಿಂದ ಅವಮಾನ ಎದುರಿಸಬೇಕಾಗಬಹುದು. ಶನೇಶ್ಚರ ಮೂಲಮಂತ್ರ ಪಠನೆ ಉತ್ತಮ.
ಮಕರ: ನಾನು ಎನ್ನುವ ಅಹಂಕಾರವನ್ನು ಬಿಟ್ಟರೆ ಒಳ್ಳೆಯದು. ಇದು ಸಂಬಂಧವನ್ನು ಕೆಡಿಸುತ್ತದೆ. ನಿಮ್ಮ ಒಳ್ಳೆಯ ಮನಸ್ಸನ್ನು ಯಾರೂ ಅರ್ಥಮಾಡಿಕೊಳುವುದಿಲ್ಲ. ಹಣ ಸಂಪಾದನೆಯಾದರೂ ಖರ್ಚು ಹೆಚ್ಚಾಗಲಿದೆ. ವಾರದ ಮಧ್ಯದಲ್ಲಿ ವೃಥಾಪವಾದ ಬರಲಿದೆ. ಎದೆಗುಂದುವ ಕಾರಣವಿಲ್ಲ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಕುಂಭ: ವೈವಾಹಿಕ ಸಂಬಂಧಗಳು ಬರಲಿದೆ, ತಕ್ಷಣೊಪ್ಪಬೇಕಾದ ಅವಶ್ಯಕತೆ ಇಲ್ಲ. ಹಣಕಾಸಿನ ವ್ಯವಹಾರ ಉತ್ತಮವಾಗಿರುವುದಲ್ಲದೆ ಹೊಸ ವ್ಯವಹಾರ ಪ್ರಾರಂಭಿಸಬಹುದು. ಆರೋಗ್ಯದ ಸಮಸ್ಯೆ ಮಾನಸಿಕ ಕಿರಿಕಿರಿಗೆ ಕಾರಣವಾಗಲಿದೆ. ಉದ್ಯೋಗದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಲ್ಲದೆ ಪದೋನ್ನತಿ ಹೊಂದಲಿದ್ದೀರಿ.
ಮೀನ: ಚಂಚಲ ಮನಸ್ಸಿನಿಂದಾಗಿ ಕೆಲಸ ಕಾರ್ಯಗಳು ವಿಳಂಬವಾಗಲಿದೆ. ಬೇಡದ ಉಸಾಬರಿಯಿಂದ ಅಪವಾದಗಳು ಕಾಡಲಿದೆ. ಉತ್ತಮ ಹಣಕಾಸಿನ ವ್ಯವಹಾರದಿಂದ ಲಾಭಗಳಿಕೆಯಾಗಲಿದೆ. ಹೊಸ ಸಂಬಂಧದಿಂದ ಮಾನಸಿಕ ಸಂತೋಷ ದೊರೆಯಲಿದೆ.
***** **** ** ಶುಭಂ ** **** *****
☺☺