ಸಿದ್ದಾಪುರ : ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ, ಲೇಖಕ ಡಾ.ಜಿ.ಜಿ ಹೆಗಡೆ ಬಾಳಗೋಡ್ ವಿರಚಿತ ‘ಪಶ್ಚಿಮ ಘಟ್ಟಗಳು ಮತ್ತು ಪರಿಸರ ವಿಜ್ಞಾನ’ ಎಂಬ ಪುಸ್ತಕ ಬಿಡುಗಡೆ ಸಮಾರಂಭ ಇಂದು ನಡೆಯಿತು.
ಸಿದ್ದಾಪುರದ ಟಿ.ಎಂ.ಎಸ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ್ ಮಾಳ್ಕೋಡ್ ಕೃತಿಯನ್ನ ಬಿಡುಗಡೆ ಮಾಡಿದರು. ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಕುರಿತಾದ ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿರೋ ಪಶ್ಚಿಮ ಘಟ್ಟಗಳಲ್ಲಿನ ಸಸ್ಯ ಪ್ರಭೇದಗಳು, ಅವುಗಳ ವ್ಯಾಪ್ತಿ, ಯಾವ ರೀತಿ ಪಶ್ಚಿಮ ಘಟ್ಟಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಅನ್ನೋದರ ಕುರಿತು ಬಿಂಬಿಸಲಾಗಿದೆ. ಸುಮಾರು 20 ಅಧ್ಯಾಯಗಳನ್ನ ಹೊಂದಿರೋ ಈ ಪುಸ್ತಕವನ್ನ ಈಗಿನ ಶಾಲಾ ಶಿಕ್ಷಣದಲ್ಲಿ ಕೂಡ ತರಬಹುದಾಗಿದೆ. ಡಾ.ಜಿ.ಜಿ ಹೆಗಡೆ ಬಾಳಗೋಡ್ ಅವರ 6ನೇ ಪುಸ್ತಕ ಇದಾಗಿದೆ.
ಈ ಸಂದರ್ಭದಲ್ಲಿ ಕೃತಿ ವಿರಚಿತ ಲೇಖಕ ಡಾ.ಜಿ.ಜಿ ಹೆಗಡೆ ಬಾಳಗೋಡ್, ಆರ್.ಎಂ ಹೆಗಡೆ ಬಾಳೇಸರ, ಸಿ.ಎಸ್ ಗೌಡರ್, ಕೆ.ಜಿ ನಾಗರಾಜ್, ಗಣೇಶ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.