ಮಹಿಳಾ ಟಿ20 ವಿಶ್ವಕಪ್ : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ

ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ಮಹಿಳಾ ವಿಶ್ವಕಪ್ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ವನಿತೆಯರ ತಂಡ ಜಯ ಸಾಧಿಸಿದೆ.


ಆಸ್ಟ್ರೇಲಿಯಾದ ಜಂಕ್ಷನ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು. ಶೇಫಾಲಿ ವರ್ಮಾ ತಂಡಕ್ಕೆ 43 ರನ್ ಗಳ ಕೊಡುಗೆ ನೀಡಿದರು. 134 ರನ್ ಗಳ ಗುರಿಯನ್ನ ಬೆನ್ನತ್ತಿದ ನ್ಯೂಜಿಲೆಂಡ್ ಮಹಿಳಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿ 3 ರನ್ ಗಳಿಂದ ಸೋಲನ್ನೊಪ್ಪಿಕೊಂಡಿತು. ಭಾರತ ಆಡಿದ 3 ಪಂದ್ಯಗಳಲ್ಲೂ ಜಯಗಳಿಸುವುದರೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

About the author

Adyot

1 Comment

Leave a Comment