ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ : ಫೈನಲ್ ಗೆ ಲಗ್ಗೆಯಿಟ್ಟ ಭಾರತ

ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರೋ ವನಿತೆಯರ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಭಾರತ ಮಹಿಳೆಯರ ತಂಡ ಫೈನಲ್ ತಲುಪಿದೆ.


ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯ ಸಂಪೂರ್ಣ ಮಳೆಗೆ ಅಹುತಿಯಾಯಿತು. ಟಾಸ್ ಕೂಡ ನಡೆಯದೇ ಪಂದ್ಯ ರದ್ದಾಯಿತು. ನಿಗದಿತ 9.30 ಕ್ಕೆ ನಡೆಯಬೇಕಿದ್ದ ಪಂದ್ಯ ಕಟ್ ಆಫ್ ಸಮಯವಾದ 11 ಗಂಟೆಯವರೆಗೂ ಮಳೆಯ ಕಾರಣ ನಡೆಯಲಿಲ್ಲ. ಆದ್ದರಿಂದ ಪಂದ್ಯವನ್ನ ರದ್ದುಪಡಿಸಲಾಯಿತು. ಸೆಮಿಫೈನಲ್ ಪಂದ್ಯಕ್ಕೆ ಯವುದೇ ಕಾಯ್ದಿರಿಸಿದ ದಿನಾಂಕವನ್ನು ಕೂಡ ನಿಗದಿಪಡಿಸಿಲ್ಲದ ಕಾರಣ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ ಫೈನಲ್ ಗೆ ತಲುಪಿತು. ಲೀಗ್ ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಕಾರಣ ಭಾರತ ತಂಡಕ್ಕೆ ಫೈನಲ್ ಹಾದಿ ಸುಗಮವಾಯಿತು.

About the author

Adyot

Leave a Comment