ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ಮುಂದಿನ ವರ್ಷ 2021 ರಲ್ಲಿ ನಡೆಯಲಿರುವ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ.
ವೇಳಾಪಟ್ಟಿಯಂತೆ ವಿಶ್ವಕಪ್ ನ್ಯೂಜಿಲೆಂಡ್ ನಲ್ಲಿ ನಡೆಯಲಿದ್ದು ಫೆಬ್ರವರಿ 6, 2021ರಂದು ಟೂರ್ನಮೆಂಟ್ ಗೆ ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯವನ್ನು ಆತಿಥೇಯ ನ್ಯೂಜಿಲೆಂಡ್ ತಂಡ ಕ್ವಾಲಿಫೈರ್ ತಂಡದ ಜೊತೆ ಅಡಲಿದೆ. ವೇಳಾಪಟ್ಟಿಯಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ಕ್ವಾಲಿಫೈ ಆಗಿದ್ದು, ಉಳಿದ ತಂಡಗಳು ಕ್ವಾಲಿಫೈರ್ ಪಂದ್ಯಗಳನ್ನ ಆಡಿ ಅರ್ಹತೆ ಪಡೆದುಕೊಳ್ಳಬೇಕಾಗಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಗೆ ಕಾಯ್ದಿರಿಸಿದ ದಿನ ಇಲ್ಲದೇ ಇದ್ದಿದ್ದು ತುಂಬಾ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ 2021 ರ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪಂದ್ಯಗಳಿಗೆ ಕಾಯ್ದಿರಿಸಿದ ದಿನವನ್ನು ನಿಗದಿಪಡಿಸಲಾಗಿದೆ. ವಿಶ್ವಕಪ್ ನ ಫೈನಲ್ ಪಂದ್ಯ ಮಾರ್ಚ್ 7 , 2021 ರಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ.