ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ವಿಶ್ವ ರಸ್ತೆ ಸುರಕ್ಷತಾ ಅಂಗವಾಗಿ ನಡೆಯುತ್ತಿರುವ ವಿಶ್ವ ಲೆಜೆನ್ಡ್ಸ್ ಲೀಗ್ ನ ಟಿ20 ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆನ್ಡ್ಸ್ ವಿರುದ್ಧ ಭಾರತ ಲೆಜೆನ್ಡ್ಸ್ ತಂಡ 5 ವಿಕೆಟ್ ಗಳ ಜಯಗಳಿಸಿದೆ.
ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಶ್ರೀಲಂಕಾ ಪರ ದಿಲ್ಶಾನ್ 23 ಹಾಗೂ ಕಪುಗೆದರಾ 23 ರನ್ ಗಳ ಕಾಣಿಕೆ ನೀಡಿದ್ರೆ ಭಾರತದ ಪರ ಬೌಲಿಂಗ್ ನಲ್ಲಿ ಮಿಂಚಿದ ಮುನಾಫ್ ಪಟೇಲ್ 4 ವಿಕೆಟ್ ಕಬಳಿಸಿದರು. 139 ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ಓಪನರ್ಸ್ ಗಳ ವಿಕೆಟ್ ಗಳನ್ನ ಬೇಗನೆ ಕಳೆದುಕೊಂಡಿತು. ನಂತರ ಕೈಫ್ 46 ಹಾಗೂ ಮಿಂಚಿನ ಬ್ಯಾಟಿಂಗ್ ನಡೆಸಿದ ಇರ್ಫಾನ್ ಪಠಾಣ್ 57 ರನ್ ಗಳಿಸಿದರು. ಇದರ ಪರಿಣಾಮವಾಗಿ ಭಾರತ ತಂಡ 18.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಭಾರತ ಆಡಿದ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿತು.