ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಇನ್ನಿಲ್ಲಾ
ಯಕ್ಷಗಾನ ಕಲಾವಿದ,ನೂರಾರು ಯಕ್ಷಗಾನ ಪ್ರಸಂಗ ರಚಿಸಿರುವ ಯಕ್ಷ ಋಷಿ ಎಂದೇ ಕರೆಸಿಕೊಳ್ಳುತ್ತಿದ್ದ ಹೊಸತೋಟ ಮಂಜುನಾಥ ಭಾಗವತ ಮಂಗಳವಾರ ಮಧ್ಯಾಹ್ನ 2.45ಕ್ಕೆ ನಿಧನರಾಗಿದ್ದಾರೆ.
ಭಾಗವತರು ಕಳೆದ ಒಂದು ತಿಂಗಳ ಕಾಲ, ಸೋಂದಾ- ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಅವರ ಅಂತ್ಯಕ್ರಿಯೆಯನ್ನು ಶಿರಸಿ ನಗರದ ಹೊಟೇಲ್ ಸಾಮ್ರಾಟ್ ಎದುರುಗಡೆ ಇರುವ ಸದ್ಗತಿ – ವಿದ್ಯಾನಗರ ರುದ್ರಭೂಮಿ ಯಲ್ಲಿ ಇಂದು ರಾತ್ರಿ 9.30ಕ್ಕೆ ನೆರವೇರಿಸಲಾಗುವುದು. ಪಾರ್ಥಿವ ಶರೀರವನ್ನು ಸಂಜೆ 5.30 ಕ್ಕೆ ಸದ್ಗತಿಗೆ ತರಲಾಗುತ್ತಿದೆ. ಶಿಷ್ಯರು ಹಾಗೂ ಅಭಿಮಾನಿಗಳು ಸದ್ಗತಿಗೆ ಆಗಮಿಸಬೇಕಾಗಿ ಯಕ್ಷ ಶಾಲ್ಮಲಾದ ಅಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಅವರು ಕೋರಿದ್ದಾರೆ.