ಯಲ್ಲಾಪುರದಲ್ಲಿ 21 ವಿದ್ಯಾರ್ಥಿಗಳಿಗೆ ಹಾಗೂ 2 ಶಿಕ್ಷಕರಿಗೆ ಕೊರೊನಾ ಖಚಿತ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಯಲ್ಲಾಪುರದಲ್ಲಿ ಖಾಸಗಿ ಕನ್ನಡ ಮಾಧ್ಯಮ ಪ್ರೌಢಶಾಲೆಯ 21 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ಕೊವಿಡ್19 ಸೊಂಕು ತಗಲಿರುವುದು ಖಚಿತವಾಗಿದೆ.
ಕೆಲ ದಿನಗಳ ಹಿಂದೆ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ೧೨೩ ಜನರ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಮವಾರ ವರದಿ ಬಂದಿದ್ದು ಇಬ್ಬರು ಶಿಕ್ಷಕರು ಮತ್ತು ೨೧ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕೊವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು ರಾಜ್ಯದ ಶಾಲಾ ವಿದ್ಯಾರ್ಥಿಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊವಿಡ್ ಕಾಣಿಸಿಕೊಂಡಿರುವುದು ಇದೇ ಪ್ರಥಮವಾಗಿದ್ದು ಸರಕಾರ,ಶಿಕ್ಷಣ ಇಲಾಖೆ ಹಾಗೂ ಪಾಲಕರು ಆತಂಕ ಪಡುವಂತಾಗಿದೆ.
####
ಟೋಲ್ ಜಗಳ ಐವರು ಆರೋಪಿಗಳ ವಿರುದ್ದ ಪ್ರಕರಣ
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಹಟ್ಟಿಕೇರಿ ಐಆರಬಿ ಟೋಲ್ಗೇಟ್ ಹತ್ತಿರ ಸ್ಥಳೀಯರಿಂದ ಟೋಲ್ ವಸೂಲಿ ಮಾಡುತ್ತಿರುವ ಬಗ್ಗೆ ಅಲಗೇರಿ ಗ್ರಾಮದ ಸುರೇಶ ರಾಮಚಂದ್ರ ನಾಯ್ಕ ಅಲ್ಲಿಯ ಸೆಕ್ಯೂರಿಟಿ ಗಾರ್ಡ ನವೀನ ಗುಪ್ತಾ ಜೊತೆ ತಕರಾರು ನಡೆಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸ್ ಜೊತೆಗೂ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿತರಾದ,ಬೊಮ್ಮಯ್ಯ ಸಣ್ಣಪ್ಪ ನಾಯಕ,ಸುರೇಶ ರಾಮಚಂದ್ರ ನಾಯಕ,ಗೋಪಾಲ ಗಿರಿಯಣ್ಣನಾಯಕ,ಸುರೇಶ ಗಿರಿಯಣ್ಣ ನಾಯಕ,ರಾಹುಲ ಸುರೇಶ ನಾಯಕ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

About the author

Adyot

Leave a Comment