ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್ ಉ.ಕ) ಅಧ್ಯಕ್ಷರಾಗಿ ಸಿದ್ದಾಪರ ಆಧಾರ ಸಂಸ್ಥೆಯ ನಾಗರಾಜ ನಾಯ್ಕ ಮಾಳ್ಕೋಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಗುರುವಾರ ಯಲ್ಲಾಪುರ ಪಟ್ಟಣದ ಟೀಡ್ ಟ್ರಷ್ಟ್ ದಿ.ಶಿವಪ್ಪ ಪೂಜಾರಿ ಗ್ರಾಮೀಣ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಫೆವಾರ್ಡ್ ಉ.ಕ ದ ಸರ್ವಸಾಧರಣಾ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಶಿರಸಿಯ ಮನುವಿಕಾಸ ಸಂಸ್ಥೆಯ ಗಣಪತಿ ಭಟ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಅಂಕೋಲಾ ಕೆ.ಎಲ್.ಇ ತಿಮ್ಮಣ್ಣ ಭಟ್.ಬಿ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಶಿರಸಿ ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ, ಸಹ ಕಾರ್ಯದರ್ಶಿಯಾಗಿ ಮುಂಡಗೋಡ ಸಿ.ಸಿಎಫ್ ಲೋಯೋಲ ಜನಸ್ಪೂರ್ತಿ ಎಸ್.ಎಚ್.ಜಿ ಟ್ರಷ್ಟ್‍ನ ಶಶಿಕಲಾ ಡುಮಿಂಗ್ ಸಿದ್ಧಿ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿಯ ಸದಸ್ಯರುಗಳಾಗಿ ಹಳಿಯಾಳದ ಕ್ರಿಯೇಟಿವ್ ಟ್ರಷ್ಟ್ ಅಧ್ಯಕ್ಷ ಲುವಿಸ್ ಎಫ್.ಪಿರೇರಾ, ಯಲ್ಲಾಪುರ ಟೀಡ್ ಟ್ರಷ್ಟ್ ವ್ಯವಸ್ಥಾಪಕ ನಿರ್ದೇಶಕಿ ಮೋಹಿನಿ ಪೂಜಾರಿ, ಕುಮಟಾ ಎ.ವಿ.ಪಿ ಸೇವಾ ಸಂಸ್ಥೆಯ ಗಣಪತಿ ಎಸ್.ನಾಯ್ಕ, ಕಾರಾವಾರದ ಕೆ.ಆರ್.ಡಬ್ಲೂ.ಸಿ.ಡಿ.ಎಸ್ ವೆಂಕಟೇಶ್ ಬಿ.ನಾಯಕ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಫೆವಾರ್ಡ್ ಉ.ಕ ಪ್ರಕಟಣೆಯಲ್ಲಿ ತಿಳಿಸಿದೆ.
ಅಭಿನಂದನೆಗಳು ಎಲ್ಲರಿಗೂ