ಯಲ್ಲಾಪುರದ ಶಾಲ್ಮಲ ನದಿಯಲ್ಲಿ ಮೂರು ಶವ ಪತ್ತೆ ಆತ್ಮಹತ್ಯೆ ಶಂಕೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಗಣೇಶಪಾಲ್ ಶಾಲ್ಮಲ ನದಿಯಲ್ಲಿ ರವಿವಾರ ಮಧ್ಯಾಹ್ನ ಮೂರು ಶವಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಯಲ್ಲಾಪುರ ಹಿತ್ಲಳ್ಳಿ ಕಲ್ಲಕೊಡ್ಲು ಗ್ರಾಮದ ರಾಜೇಶ್ವರಿ ನಾರಾಯಣ ಹೆಗಡೆ(52),ಅವರ ಮಗಳಾದ ವಾಣಿ ಪ್ರಕಾಶ ವೈ(28),ಹಾಗೂ ಇನ್ನೂ ನಾಮಕರಣವಾಗದ 11 ತಿಂಗಳ ಮಗು ಮೃತ ದುರ್ದೈವಿಗಳಾಗಿದ್ದಾರೆ.
ನವಂಬರ-20 ರಂದು ಬೆಳಿಗ್ಗೆ-9 ಗಂಟೆಗೆ ಯಲ್ಲಾಪುರಕ್ಕೆ ಹೋಗುತ್ತೇವೆ ಎಂದು ಹೋದವರು ನಾಪತ್ತೆಯಾಗಿದ್ದಾರೆ ನವಂಬರ-22 ರಂದು ಗಣೇಶಪಾಲ್ ಶಾಲ್ಮಲ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಇವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಯಾರಾದರೂ ಸಾಯಿಸಿರಬಹುದು ಎಂದು ಮೃತ ರಾಜೇಶ್ವರಿ ಹೆಗಡೆಯವರ ಪತಿ ನಾರಾಯಣ ಗಣಪತಿ ಹೆಗಡೆ ಪೊಲೀಸ್ ದೂರಲ್ಲಿ ತೀಳಿಸಿದ್ದಾರೆ.
ಯಲ್ಲಾಪುರ ಪಿ.ಎಸ್.ಐ.ಬಿ.ಜೆ.ಲಮಾಣಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About the author

Adyot

Leave a Comment