ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿಯಲ್ಲಿ
ಧರೆ ಕುಸಿದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಇಡಗುಂದಿ ಸಂತೇಬೈಲ್ ನ ಮಂಜುನಾಥ ಭಟ್ಟ ಎನ್ನುವವರ ಮಾಲೀಕತ್ವದ ತೋಟದ ಕೆಲಸಕ್ಕೆಂದು ಏಳು ಮಂದಿ ಕಾರ್ಮಿಕರು ತೆರಳಿದ್ದರು. ಧರೆ ಅಗೆದು ತೋಟಕ್ಕೆ ಮಣ್ಣು ಹಾಕುತ್ತಿದ್ದ ವೇಳೆಗೆ ತೋಟದ ಧರೆ ಮಣ್ಣು ಕಾರ್ಮಿಕರ ಮೇಲೆ ಕುಸಿದಿದೆ.
ಈ ವೇಳೆ ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗೌಳಿವಾಡದ ನಿವಾಸಿಗಳಾದ ಭಾಗ್ಯಶ್ರೀ ಎಡಗೆ (21), ಲಕ್ಷ್ಮೀ ಡೋಯಿಪಡೆ (38), ಸಂತೋಷ್ ಡೋಯಿಪಡೆ (18) ಹಾಗೂ ಮಾಳು ಡೋಯಿಪಡೆ (21) ಅವರ ಮೇಲೆ ಮಣ್ಣು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಗ್ಗಿಬಾಯಿ, ಸೋನಿ ಹಾಗೂ ಬೀರು ಎನ್ನುವವರು ಈ ವೇಳೆ ಅಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
####
ಯಲ್ಲಾಪುರ ಅರೆಬೈಲ್ ಹತ್ತಿರ ಪೊಲೀಸ್ ವಾಹನ ಅಪಘಾತ ಡಿವೈಎಸಪಿ ಗೆ ಗಾಯ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಸಮೀಪ ರಸ್ತೆ ದಾಟಲು ಬಂದ ಹುಡುಗಿಯನ್ನು ತಪ್ಪಿಸಲು ಹೋಗಿ ನಿಯಂತ್ರಣತಪ್ಪಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಡಿವೈಎಸಪಿ ಅರವಿಂದ ಕಲಗುಜ್ಜಿ ಹಾಗೂ ಜೀಪ ಚಾಲಕ ಗಣೇಶ ನಾಯ್ಕ,ಗಾಯಗೊಂಡಿದ್ದಾರೆ.
####
ರೈತ ವಿರೋಧಿ ಕಾಯ್ದೆ ವಿರೋಧಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ
ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವಕರ್ ನೇತೃತ್ವದಲ್ಲಿ
ಯಲ್ಲಾಪುರ ಕಾಂಗ್ರೇಸ್ ಕಛೇರಿಯಿಂದ ಪಾದಯಾತ್ರೆ ಮುಖಾಂತರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕೃಷ್ಟ ಕಾಮ್ಕರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ,ಕೇಂದ್ರ ಮತ್ತು ರಾಜ್ಯದಲ್ಲಿರುವ
ಬಿ.ಜೆ.ಪಿ ಸರಕಾರಕ್ಕೆ ಕಣ್ಣು,ಕಿವಿ ಎರಡು ಇಲ್ಲ ಬರಿ ಸುಳ್ಳುಗಳ ಸರಮಾಲೆಯನ್ನು ಹೇಳಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರ ಹಿಡಿದಿದೆ.ಕಾಂಗ್ರೆಸ್ ಪಕ್ಷಕ್ಕೆ ಕಣ್ಣು, ಕಿವಿ ಎರಡು ಇದೆ ಜನರು ಕಷ್ಟ ಹಾಗೂ ದುಃಖಗಳನ್ನು ಅರ್ಥ ಮಾಡಿಕೊಳ್ಳಲು ಆದರೆ ಪಕ್ಷಕ್ಕೆ ಅಧಿಕಾರ ಇಲ್ಲ ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದಿಲ್ಲ ಹಾಗಾಗಿ ಅಧಿಕಾರದಲ್ಲಿ ಇಲ್ಲ.
ಬಿ.ಜೆ.ಪಿ ಸರಕಾರದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ಹೊಸ ಯೋಜನೆಗಳು ಬಂದಿಲ್ಲ ಹಾಗೇ ಯಾವುದೇ ಹೊಸ ಯೋಜನೆಯ ಅಡಿಗಲ್ಲು ಕಾಣುವುದಿಲ್ಲ ಪ್ರತಿಯೊಬ್ಬ ಶಾಸಕರು ನಾನು ಸಚಿವನಾಗಬೇಕು ಎಂದು ಹಪಿ ಹಪಿಸುತ್ತಿದ್ದಾರೆ.
ಸರಕಾರದ ಸಚಿವರೊಬ್ಬರು ಹೇಳುತ್ತಾರೆ ಯಾರ ಮನೆಯಲ್ಲಿ ಟಿ.ವಿ, ಪ್ರಿಡ್ಜ,ಬೈಕ್ ಇದ್ದರೆ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡುತ್ತೇವೆ ಅಂತಾ ಎರಡು ದಿನ ಬಿಟ್ಟು ರಾಜ್ಯದ ಮುಖ್ಯಮಂತ್ರಿಗಳು ಹೇಳುತ್ತಾರೆ ನಮ್ಮ ತಲೆಯಲ್ಲಿ ಬಿ.ಪಿ.ಎಲ್ ಕಾರ್ಡ್ ರದ್ದು ಪಡಿಸುವ ವಿಚಾರ ಇಲ್ಲ ಎಂದು ಹೀಗೆ ಸರಕಾರ ಗೊಂದಲದ ಗೂಡಾಗಿದೆ ಎಂದು ಹೇಳಿದರು.