ವರ್ಷದ ಮೊದಲ ಮಂಗನಕಾಯಿಲೆ ಪ್ರಕರಣ ಪತ್ತೆ

ಆದ್ಯೋತ್ ಸುದ್ದಿ ನಿಧಿ : ಈ ವರ್ಷದ ಮೊದಲ ಮಂಗನಕಾಯಿಲೆ ಪ್ರಕರಣ ಸಿದ್ದಾಪುರದ ಕುಳಿಬೀಡಿನಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲೇ ಈ ವರ್ಷದ ಮಂಗನಕಾಯಿಲೆಯ ಪ್ರಥಮ ಪ್ರಕರಣ ಇದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಳಿಬೀಡಿನ 51 ವರ್ಷದ ಮಹಿಳೆಯಲ್ಲಿ ಈ ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ತೊಂದರೆ ಇಲ್ಲ ಅಂತ ಖಚಿತ ಮಾಹಿತಿ ಆದ್ಯೋತ್ ನ್ಯೂಸ್ ಗೆ ಲಭ್ಯವಾಗಿದೆ. ಕಳೆದ ಎರಡು ವರ್ಷಗಳಿಂದ ಸಿದ್ದಾಪುರ ತಾಲೂಕಿನಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಮಂಗನಕಾಯಿಲೆ ಪ್ರಕರಣಗಳು ಈ ವರ್ಷ ಇನ್ನುವರೆಗೆ ಕಂಡುಬಂದಿಲ್ಲವಾಗಿತ್ತು. ತಾಲೂಕಿನೆಲ್ಲೆಡೆ ಈಗಾಗಲೇ ಮುಂಜಾಗೃತಾ ಕ್ರಮವಾಗಿ ಮಂಗನ ಕಾಯಿಲೆ ಲಸಿಕೆಯನ್ನ ವಿತರಿಸಲಾಗುತ್ತಿದೆ. ಈವರೆಗೆ ಸಿದ್ದಾಪುರ ತಾಲೂಕಿನ 49 ಗ್ರಾಮಗಳನ್ನು ಮಂಗನಕಾಯಿಲೆಯ ಹೈ ರಿಸ್ಕ್ ಗ್ರಾಮಗಳೆಂದು ಗುರುತಿಸಲಾಗಿದ್ದು, 92 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಲಿಸಲಾಗಿದೆ. ಇದರಲ್ಲಿ ಕುಳಿಬೀಡಿನ ಒಬ್ಬ ಮಹಿಳೆಯಲ್ಲಿ ಪಾಸಿಟಿವ್ ಇರೋದು ದಾಖಲಾಗಿದೆ.

About the author

Adyot

Leave a Comment