ಆದ್ಯೋತ ಕ್ರೈಂ ನ್ಯೂಸ್ ಡೆಸ್ಕ್: ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಸಮೀಪದ ಜಾಗನಮನೆಯ ಗೋಪಾಲ ದೇವೆಂದ್ರ ಹೆಗಡೆ ಹಾಗೂ ನಾಗರಾಜ ಗಣೇಶ ಹೆಗಡೆ ಎನ್ನುವವರ ಮನೆಯಲ್ಲಿ ಬುಧವಾರ ರಾತ್ರಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಶಾಮಿಲಾಗಿದ್ದ ಜಾಗನಮನೆ ಸಮೀಪದ ಹುಲಿಮನೆಯ ಅನಂತ ವಿಷ್ಣು ಕೋತ ನೀಡಿದ ಮಾಹಿತಿಯನ್ನಾಧರಿಸಿ ಮಧ್ಯಪ್ರದೇಶದ ಧಾರಾ ಜಿಲ್ಲೆಯ ಪಿಪಲವಾ ಗ್ರಾಮದ ಪ್ರತಾಪಸಿಂಗ್ ರತನಸಿಂಗ್ ಮಿನಾವ, ಭರತ ಕುಮಸಿಂಗ್ ಅಜನಾರಿಯಾ,ಜಾಗನಮನೆ ಹುಲಿಮನೆಯ ಶಿವಾನಂದ ರಘುನಾಥ ಕೋತ ಇವರನ್ನು ಬಂಧಿಸಿರುವ ಪೊಲೀಸರು ನಗದು ಹಣ, ಬಂಗಾರದ ಆಭರಣ ಹಾಗೂ 2 ಮೋಟಾರ್ ಸೈಕಲ್ ಸೇರಿದಂತೆ ಸುಮಾರು 2.10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ನಾಲ್ಕು ಜನರಿದ್ದ ದರೋಡೆಕೋರರ ಗುಂಪು ಯಲ್ಲಾಪುರ ತಾಲೂಕಿನ ಜಾಗನಮನೆ ಸಮೀಪದ ಹುಲಿಮನೆಯ ನಾಗರಾಜ ಗಣೇಶ ಹೆಗಡೆ ಹಾಗೂ ಗೋಪಾಲ ದೇವೆಂದ್ರ ಹೆಗಡೆ ಎನ್ನುವವರ ಮನೆಯ ಬಾಗಿಲು ಮುರಿದು ಮಾರಕಾಸ್ತ್ರ ತೋರಿಸಿ ಬೆದರಿಸಿ ನಗ-ನಾಣ್ಯಗಳನ್ನು ದೋಚಿದ್ದರು.