ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು : ಡಿ.ವೈ.ಎಸ್.ಪಿ ಗೋಪಾಲಕೃಷ್ಣ ನಾಯಕ್

ಸಿದ್ದಾಪುರ : ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಇದು ಸೈಬರ್ ಅಪರಾಧಗಳಿಗೆ ಕೂಡ ಇದೆ ಮಾಡಿ ಕೊಡುತ್ತಿದೆ. ಪಾಲಕರು ಇದರ ಬಗ್ಗೆ ಗಮನಹರಿಸಿ ಮಕ್ಕಳು ಇದರಲ್ಲಿ ಪಾಲ್ಗೊಳ್ಳದಂತೆ ತಡೆಯುವುದು ಅವಶ್ಯಕ ಅಂತ ಶಿರಸಿ ಡಿ.ವೈ.ಎಸ್.ಪಿ ಗೋಪಾಲಕೃಷ್ಣ ನಾಯಕ್ ಹೇಳಿದರು.

ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ನಡೆದ ಅಪರಾಧಗಳ ಕುರಿತು ಸಾರ್ವಜನಿಕರ ಜೊತೆ ಸಂವಾದ ನಡೆಸಿ ಮಾತನಾಡಿದ ಡಿ.ವೈ.ಎಸ್.ಪಿ, ಇಂದಿನ ದಿನಗಳಲ್ಲಿ ಸೋಷಿಯಲ್ ಮಾಧ್ಯಮಗಳು ಹಲವಾರು ಅಪರಾಧಗಳಿಗೆ ದಾರಿ ಮಾಡಿಕೊಡುತ್ತಿವೆ. ಇದರ ಕಡೆ ಯುವಜನಾಂಗದ ಸೆಳೆತ ಹೆಚ್ಚಾಗುತ್ತಿದೆ. ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಸೈಬರ್ ಕ್ರೈಂ ಇಲಾಖೆ ಇದರ ಬಗ್ಗೆ ಗಂಭೀರವಾಗಿ ಕ್ರಮಗಳನ್ನ ಕೈಗೊಳ್ಳುತ್ತಿದೆ. ಅದೇ ರೀತಿಯಲ್ಲಿ ಡ್ರಗ್ಸ್ ಹಾಗೂ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಯುವಪೀಳಿಗೆ ಬಲಿಯಾಗುತ್ತಿದೆ. ಇದು ಮಕ್ಕಳ ವಿದ್ಯಾಭ್ಯಾಸಗಳಿಗೂ ಕೂಡ ಅಡೆತಡೆಯಾಗುತ್ತಿದೆ. ಪಾಲಕರು ದಯವಿಟ್ಟು ಮಕ್ಕಳ ಚಲನ ವಲನಗಳ ಬಗ್ಗೆ ನಿಗಾ ವಹಿಸಬೇಕು. ರಸ್ತೆ ಸುರಕ್ಷತೆ ನಿಯಮಗಳನ್ನ ಎಲ್ಲರೂ ಪಾಲಿಸಬೇಕು. ವಿಶೇಷವಾಗಿ ರಾಜ್ಯದಲ್ಲೇ ಪ್ರಥಮವಾಗಿ ಜಿಲ್ಲೆಯ ಸಿದ್ದಾಪುರದಲ್ಲಿ ‘ಓಬವ್ವ ಪಡೆ’ ರಚಿಸಲಾಗಿದೆ. ಇಲ್ಲಿನ ಓಬವ್ವ ಪಡೆಯ ಸಾಧನೆಗೆ ಅಭಿನಂದಿಸುತ್ತೇನೆ. ಸಾರ್ವಜನಿಕರೂ ಕೂಡ ಪೊಲೀಸರಿಗೆ ಸಹಕಾರ ನೀಡಬೇಕು. ತಾಲೂಕಿನಲ್ಲಿ ನಡೆಯುತ್ತಿರೋ ಅಕ್ರಮ ಸಾರಾಯಿ ಮಾರಾಟ, ಓಸಿ ಮಟ್ಕಾ ಹಾಗೂ ಇಸ್ಪೀಟ್ ಆಟಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಕೇಸ್ ಗಳನ್ನ ದಾಖಲಿಸಲಾಗುತ್ತದೆ ಅಂತ ಎಚ್ಚರಿಕೆ ನೀಡಿದರು.

ಸಂವಾದದಲ್ಲಿ ಅನೇಕ ಸಾರ್ವಜನಿಕರು, ಸಿದ್ದಾಪುರ ಸಿ.ಪಿ.ಐ ಪ್ರಕಾಶ್, ಪಿ.ಎಸ್.ಐ ಮಂಜುನಾಥ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

About the author

Adyot

Leave a Comment