ಕ್ಯಾನ್ಬೆರಾ: ಬೆಳಕಿನ ಹಬ್ಬ ದೀಪಾವಳಿಗೆ ಭಾರತದ ಮಿತ್ರ ದೇಶ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಟ್ವಿಟ್ಟರ್ನಲ್ಲಿ ಶುಭಾಶಯ ಕೋರಿದ್ದಾರೆ. ವಿಡಿಯೋವೊಂದರಲ್ಲಿ ಹ್ಯಾಪಿ ದಿವಾಳಿ, ಕಿತ್ನಾ ಅಚ್ಚಾ ಹೈ ದಿವಾಳಿ ಕಾ ತ್ಯೋಹಾರ್..(ದೀಪಾವಳಿ ಹಬ್ಬ ಎಷ್ಟು ಸುಂದರವಾಗಿದೆ) ಅಂತಾ ವಿಶ್ ಮಾಡಿದ್ದಾರೆ.
ದೀಪಾವಳಿ ಹಬ್ಬ ಆಚರಿಸುವುದರ ಹಿಂದಿನ ನಂಬಿಕೆ ಹಾಗೂ ಮೌಲ್ಯಗಳನ್ನು ನಾನು ಇಷ್ಟಪಡುತ್ತೇನೆ ಅಂತ ಮಾರಿಸನ್ ಹೇಳಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ದೇಶವು, ಹಿಂದುಳಿದ ಜನ, ವೈವಿಧ್ಯಮಯ ಸಂಸ್ಕೃತಿ ಹಾಗೂ ವಿವಿಧ ನಂಬಿಕೆಯಿಂದ ಕೂಡಿರುವ ಜನ ಸಾಮರಸ್ಯದಿಂದ ಬದುಕುತ್ತಿರುವ ದೇಶ ಅಂತಾ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಇನ್ನು, ತಮ್ಮ ವಿಡಿಯೋದ ಅಂತ್ಯದಲ್ಲಿ ಅವರು ದೀಪಾವಳಿ ಹಬ್ಬವನ್ನ ಆಚರಿಸುವಂತೆ ಆಸ್ಟ್ರೇಲಿಯಾದ ಜನತೆಗೂ ಕರೆ ನೀಡಿದ್ದಾರೆ.