ಸಿದ್ದಾಪುರ ಭಾನ್ಕುಳಿಮಠದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ “ಗೋ ವಿಚಾರಸಂಕಿರಣ”

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿಯ ಶ್ರೀ ರಾಮದೇವಮಠದಲ್ಲಿ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಶಂಕರಪಂಚಮೀ ಉತ್ಸವದಲ್ಲಿ “ಗೋಪಾಲ ಗೌರವ” ಪ್ರಶಸ್ತಿ ಪರಸ್ಕೃತರನ್ನೊಳಗೊಂಡು ವಿಚಾರ ಸಂಕಿರಣ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಮುಂಬೈನ ದಿನೇಶ ಶಹರಾ ಫೌಂಡೇಶನ್‌ನ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ದಿನೇಶ ಶಹರಾ ಶ್ರೀರಾಮಚಂದ್ರಾಪುರಮಠದ ಗೋಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

filter: 0; jpegRotation: 0; fileterIntensity: 0.000000; filterMask: 0;

ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯದಲ್ಲಿ “ರಾಷ್ಟ್ರೋತ್ಥಾ
ನ ಗೋ ಶಾಲೆ” ಪ್ರಾರಂಭಿಸಿ, ಗವ್ಯ ಉತ್ಪನ್ನಗಳಿಂದ ಔಷಧ ತಯಾರಿಸಿ ರೋಗಿಗಳಿಗೆ ನೀಡುತ್ತಿರುವುದಲ್ಲದೇ, ನೂರಾರು ಗವ್ಯಸಿದ್ಧ ವೈದ್ಯರನ್ನು ತರಬೇತಿಗೊಳಿಸಿ ಸಮಾಜಕ್ಕೆ ನೀಡಿರುವ ಡಾ.ಜೀವನಕುಮಾರ ಮಾತನಾಡಿ, ಗೋಮೂತ್ರವು ಔಷಧಗಳ ಆಗರ. ಗೋಮೂತ್ರದ ಚಿಕಿತ್ಸೆಯಿಂದ ಮನುಷ್ಯನ 72 ಸಾವಿರ ನಾಡಿಗಳ ಶುದ್ಧೀಕರಣ ಸಾಧ್ಯ.ಭವಿಷ್ಯದಲ್ಲಿ ಗೋ ಆಧಾರಿತ ಕೃಷಿ ಹಾಗೂ ಗೋ ಆಧಾರಿತ ಚಿಕಿತ್ಸೆ ಬಂದೇ ಬರುತ್ತದೆ ಎಂದು ಹೇಳಿದರು.
ಕ್ಯಾನ್ಸರ್‌ನಂತಹ ರೋಗಕ್ಕೆ “ಜಗದಾಂಬಾ ಮಾ ಗೋ ಪ್ರಾಡಕ್ಟ್ಸ್” ಮೂಲಕ ಗವ್ಯ ಉತ್ಪನ್ನಗಳನ್ನು ತಯಾರಿಸಿ ಆ ಮೂಲಕ ಚಿಕಿತ್ಸೆ ನೀಡುತ್ತಿರುವ, ಗೋಮೂತ್ರ-ಸಗಣಿ ಆಧಾರಿತ ಕೀಟ ನಿಯಂತ್ರಕ ಕಂಡುಹಿಡಿದಿರುವ ಕಾಸರಗೋಡಿನ ನೆಕ್ಕಲಕೆರೆಯ ಸುಬ್ರಹ್ಮಣ್ಯಪ್ರಸಾದ ಮಾತನಾಡಿ, ಗೋವಿನ ಸಗಣಿಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಬಿಸಿಲು, ಮಳೆ, ಗಾಳಿ, ಕಸ ತಗಲದಂತೆ ಸಗಣಿಯನ್ನು ಸಂರಕ್ಷಿಸಿ ಅದನ್ನೇ ಮೂಲವಾಗಿಟ್ಟುಕೊಂಡು ವಿವಿಧ ರೀತಿಯ ಕಾಯಿಲೆಗಳಿಗೆ ಔಷಧ ತಯಾರಿಸಬಹುದು. ಆರ್ಥಿಕ ನಷ್ಟವಿಲ್ಲದೇ ಗೋ ಉದ್ಯಮ ನಡೆಸಬಹುದು. ಸಗಣಿ ಗೊಬ್ಬರವನ್ನೇ ಹೆಚ್ಚಾಗಿ ಬಳಸುವ ಮೂಲಕ ಭವಿಷ್ಯದ ಜನಾಂಗಕ್ಕೆ ಫಲವತ್ತಾದ ಭೂಮಿಯನ್ನು ಹಸ್ತಾಂತರಿಸುವ ಜವಾಬ್ದಾರಿ ಪ್ರಜ್ಞಾವಂತ ಸಮಾಜದ ಮೇಲಿದೆ ಎಂದರು.

filter: 0; jpegRotation: 0; fileterIntensity: 0.000000; filterMask: 0;

ತಮ್ಮ “ಪರಂಪರಾ ಗೋಕುಲಂ ಗೋ ಶಾಲೆ”ಯಲ್ಲಿ 3೦೦ ಕ್ಕೂ ಹೆಚ್ಚು ಗೋವುಗಳನ್ನು ಸಾಕಿ ಸಲಹುತ್ತಿರುವ, ಗೋ ಆಧಾರಿತ ಕೃಷಿ, ಗವ್ಯ ಉತ್ಪನ್ನ ತಯಾರಿಕೆಯಲ್ಲಿ ಹೆಸರು ಮಾಡಿರುವ ಕೇರಳ ಕಾಸರಗೋಡಿನ ಪೆರಿಯದ ನಾಗರತ್ನಾ ವಿಷ್ಣು ಹೆಬ್ಬಾರ ಮಾತನಾಡಿ, ಹಸುಗಳೂ ಸಹ ಸಂಗೀತವನ್ನು ಆಸ್ವಾದಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿತಿಂಗಳೂ ನಮ್ಮ ಗೋಶಾಲೆಯಲ್ಲಿ ಒಂದು ದಿನ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದೇವೆ. ವರ್ಷದಲ್ಲಿ ಒಮ್ಮೆ 1೦ ದಿನಗಳ ಸಂಗೀತ ಮಹೋತ್ಸವವನ್ನೂ ಆಚರಿಸಿಕೊಂಡು ಬಂದಿದ್ದೇವೆ. ರಾಘವೇಶ್ವರಭಾರತೀ ಶ್ರೀಗಳವರ ಆಶೀರ್ವಾದ ಪಡೆದು ಗೋ ಶಾಲೆ ಪ್ರಾರಂಭಿಸಿದ್ದು ಗೋವನ್ನು ಸಾಕುವ ವಿಚಾರದಲ್ಲಿ ಲಾಭ ಹಾನಿಯ ಲೆಕ್ಕವನ್ನು ಪರಿಗಣಿಸುತ್ತಿಲ್ಲ. ಈ ಕಾರ್ಯ ನಮ್ಮ ಮನಸ್ಸಿಗೆ ನೆಮ್ಮದಿ ನೀಡುವ ಕೆಲಸ. ನಾವು ನಂಬಿರುವ ಗೋ ಮಾತೆ ನಮ್ಮ ಕೈ ಬಿಟ್ಟಿಲ್ಲ ಎಂದರು.
“ಮಹಾವೀರ ಲಿಂಬ್ ಸೆಂಟರ್” ಸ್ಥಾಪಕರಾಗಿ ವಿಕಲಚೇತನರಿಗೆ ಈವರೆಗೆ ಸುಮಾರು 5೦ ಸಾವಿರಕ್ಕೂ ಮಿಕ್ಕಿ ಕೃತಕ ಕಾಲುಗಳನ್ನು ಉಚಿತವಾಗಿ ಪೂರೈಸಿದ್ದಲ್ಲದೇ, ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳಲ್ಲಿ ಕಾಲು ಕಳೆದುಕೊಂಡ ಹಸುಗಳಿಗೂ ಕೃತಕ ಕಾಲುಗಳನ್ನು ತಯಾರಿಸಿ ಉಚಿತವಾಗಿ ಪೂರೈಸುತ್ತಿರುವ ಹುಬ್ಬಳ್ಳಿಯ ಸಮಾಜಸೇವಕ ಮಹೇಂದ್ರ ಹಸ್ತಿಮಲ್‌ಜಿ ಸಿಂಘಿ ಮಾತನಾಡಿ, ಹಸುಗಳಿಗೆ ಕೃತಕ ಕಾಲುಗಳನ್ನು ಪೂರೈಸುವಲ್ಲಿ ನಮ್ಮ ಸಂಘಟನೆ ಸದಾ ಸಿದ್ಧವಿದೆ. ನಮ್ಮನ್ನು ಸಂಪರ್ಕಿಸಿದಲ್ಲಿ ನಮ್ಮ ಜನರೇ ಬಂದು ಗೋವಿನ ಕಾಲಿನ ಅಳತೆ ತೆಗೆದುಕೊಂಡು ಕೃತಕ ಕಾಲು ತಯಾರಿಸಿ, ಉಚಿತವಾಗಿ ಪೂರೈಸುತ್ತೇವೆ. ನೀಡಿರುವ ಕೃತಕ ಕಾಲು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ನಿರಂತರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.

ಗೋ ಆಧಾರಿತ ಕೃಷಿಯ ಜೊತೆಯಲ್ಲಿ ಸಾವಯವ ಕೃಷಿ ತಜ್ಞರಾಗಿ ನಾಡಿನೆಲ್ಲೆಡೆ ಮಾರ್ಗದರ್ಶನ ಮಾಡುತ್ತಿರುವ ಬೈಲಹೊಂಗಲದ ಬಾಬುರಾವ್ ಪಾಟೀಲ ಮಾತನಾಡಿ, ಗೋ ಆಧಾರಿತ ಕೃಷಿ, ಜೀವಾಮೃತ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು. ನಾವು ನಡೆಸುತ್ತಿರುವ ಕೃಷಿಯ ಜೊತೆಯಲ್ಲಿ ನಾವು ಬೆಳೆಯುತ್ತಿರುವ ಗಿಡಮರ, ಸಸಿಗಳೊಂದಿಗೆ ಸಂವಹನ ನಡೆಸಬೇಕು. ಇದರಿಂದಲೂ ಉತ್ತಮ ಸ್ಪಂದನೆದೊರೆಯುವುದು ಅನುಭವಕ್ಕೆ ಬಂದಿದೆ ನಮ್ಮ ಹೊಲಗಳಲ್ಲಿ ಆಳೆತ್ತರದ ಕಳೆಗಳನ್ನು ನಿಸರ್ಗದತ್ತವಾಗಿ ಬೆಳೆಯುವಂತೆ ಮಾಡಿ ಅವುಗಳನ್ನು ಸ್ಥಳದಲ್ಲಿಯೇ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಬರುತ್ತಿದ್ದೇವೆ ಎಂದು ವಿವರಿಸಿದರು.
ದಿನೇಶ ಶಹರಾ ಫೌಂಡೇಶನ್‌ನ ಮೀರಾಜಿ ಮಾತನಾಡಿ, ಮಕ್ಕಳಿಗೆ, ಮಹಿಳೆಯರಿಗೆ, ಜನಸಾಮಾನ್ಯರಿಗೆ ಆರೋಗ್ಯ ಸಂಬAಧಿ ಕಾರ್ಯಮಾಡುವುದರೊಂದಿಗೆ ಕುಡುಕರಿಗೆ ಚಟ ನಿಲ್ಲಿಸುವಲ್ಲಿ, ಅವರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಮ್ಮ ಪೌಂಡೇಶನ್ ಕೆಲಸ ಮಾಡುತ್ತಾ ಬಂದಿದೆ. ಮಾನವರ ಹುಟ್ಟಿನಿಂದ ಕೊನೆಯವರೆಗೂ ಅಮೃತ ಸದೃಶ ಹಾಲು ನೀಡುತ್ತಿರುವ ಸಾಧು ಪ್ರಾಣಿಯಾದ ಹಸುವಿನ ಸೇವೆಯಲ್ಲಿ ನಿರತರಾಗುವ ಮೂಲಕ ಶಾಂತಿ, ನೆಮ್ಮದಿ ಪಡೆಯುತ್ತಿದ್ದೇವೆ ಎಂದರು.
ಕಾಮದುಘಾ ಟ್ರಸ್ಟಿನ ಪ್ರಮುಖ ಡಾ.ವೈ.ವಿ.ಕೃಷ್ಣಮೂರ್ತಿ ಉಪಸ್ಥಿತರಿದ್ದು ಮಾತನಾಡಿದರು.
ಸಾರ್ವಜನಿಕರು ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದು ಸಂಶಯ ನಿವಾರಿಸಿಕೊಂಡರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು.

About the author

Adyot

Leave a Comment