ಸಿದ್ದಾಪುರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರವಾಗಿ ಸಿ.ಟಿ.ರವಿ ಪ್ರಚಾರ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿದರು
ಪ್ರಜ್ವಲ ರೇವಣ್ಣ ಪ್ರಕರಣದಿಂದ ಮುಂದಿನ ವಾರ ನಡೆಯಲಿರುವ 14 ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾಗಶಃ ಪರಿಣಾಮ ಬೀರಲಿದೆ ಅದರಂತೆ ನೇಹಾ ಹತ್ಯೆ ಪ್ರಕಣ ದಲಿತ ಯುವಕನ ಕೊಲೆ ಪ್ರಕರಣವೂ ಪರಿಣಾಮ ಬೀರಲಿದೆ ಎಂದು ಸಿ.ಟಿ.ರವಿ ಹೇಳಿದರು.

ನಮಗೆ ಎಸ್‌ಐಟಿ ತನಿಖೆಯಲ್ಲಿ ವಿಶ್ವಾಸವಿದೆ ಆದರೆ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರದ ಮೇಲೆ ವಿಶ್ವಾಸವಿಲ್ಲ ಅವರು ತನಿಖೆಯ ದಿಕ್ಕು ತಪ್ಪಿಸಬಹುದು ಆದ್ದರಿಂದ ತನಿಖೆಯನ್ನು ಸುಪ್ರಿಂಕೋರ್ಟ ಅಥವಾ ಹೈಕೋರ್ಟ್ ಮಹಿಳಾ ನ್ಯಾಯಧೀಶರ ಅಡಿಯಲ್ಲಿ ಪ್ರಜ್ವಲ ರೇವಣ್ಣ ಕೇಸ್ ತನಿಖೆ
ನಡೆಯಬೇಕು. ಬಿಜೆಪಿ ಯಾರನ್ನು ರಕ್ಷಿಸುವ ಕೆಲಸ ಮಾಡುವುದಿಲ್ಲ ನಮಗೆ ದೇಶದ ಸಂವಿಧಾನ,ಕಾನೂನಿನ ಮೇಲೆ ನಂಬಿಕೆ ಇದೆ. ತಪ್ಪು ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಲೇ ಬೇಕು ಪ್ರಜ್ವಲ ರೇವಣ್ಣ ತಪ್ಪು ಮಾಡಿದರೆ ಶಿಕ್ಷೆಯಾಗಲೇ ಬೇಕು ಎಂದು ಹೇಳಿದರು.

ನಮ್ಮ ದೇಶ ಜಗತ್ತಿನ ಯಾವುದೇ ದೇಶದ ಎದುರು ತಲೆಬಾಗಬಾರದು ಎನ್ನುವುದು ಪ್ರತಿಯೊಬ್ಬ ಭಾರತೀಯನ ಕನಸು ಮೋದಿ ಈ ಕನಸನ್ನು ನನಸು ಮಾಡಿದ್ದಾರೆ ಇಂದು ಭಾರತ ಜಗತ್ತಿನ ಎಲ್ಲಾ ದೇಶಗಳ ಎದುರು ತಲೆ ಎತ್ತಿ ನಿಂತಿದೆ ಇದಕ್ಕೆ ಕಾರಣ ಕಳೆದ ಹತ್ತುವರ್ಷಗಳಿಂದ ದೇಶವನ್ನು ಆಳಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ನಾವು ನಮ್ಮ ಸಂಕಲ್ಪ ಪತ್ರದಲ್ಲಿ ಮುಂದಿನ 24 ವರ್ಷದಲ್ಲಿ ಭಾರತದ ಚಿತ್ರಣವನ್ನು ಬದಲಾಯಿಸುವ ಚಿತ್ರಣವನ್ನು ನೀಡಿದ್ದೆವೆ. ದೇಶವನ್ನು ಸ್ವಾವಲಂಬಿ,ಆತ್ಮನಿರ್ಭರ ದೇಶವನ್ನಾಗಿಸುವ ನೀಲನಕ್ಷೆ ನೀಡಲಾಗಿದೆ. ಕಳೆದ ಹತ್ತುವರ್ಷದಲ್ಲಿ ಜಗತ್ತನ್ನು ಕೊರೊನಾ ಕಾಡಿದೆ, ಉಕ್ರೆನ್-ರಷ್ಯಾ,ಇಸ್ರೆಲ್-ಅರಬ್ ದೇಶಗಳ ಯುದ್ದ ನಡೆದಯುತ್ತಿದೆ ಆದರೂ ದೇಶದ ಜೆಡಿಪಿ ದರ ಸ್ಥಿರವಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ ದುರಾಡಳಿತದಿಂದ ದಿವಾಳಿಯಾಗಿದ್ದ ಭಾರತ ವಿಮಾನದಲ್ಲಿ ಟನ್‌ಗಟ್ಟಲೆ ಬಂಗಾರವನ್ನು ಅಡಮಾನವಿಟ್ಟು ಸಾಲ ಪಡೆಯಲಾಗುತ್ತಿತ್ತು ಆದರೆ ಈಗ 76 ದೇಶಗಳಿಗೆ ನಾವು ಸಹಾಯ ಹಸ್ತ ನೀಡುತ್ತಿದ್ದೆವೆ ಈ ಬದಲಾವಣೆಗೆ ಕಾರಣ ಮೋದಿಯವರ ಬ್ರಷ್ಟಾಚಾರರಹಿತ ಆಡಳಿತ ಎಂದು ಹೇಳಿದರು.

ಐಎನ್‌ಡಿಐಎ ಒಕ್ಕೂಟಕ್ಕೆ ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ ಅವರವರಲ್ಲೆ ಕಿತ್ತಾಟ ಮಾಡಿಕೊಳ್ಳುತ್ತಾರೆ ಅವರ ಉದ್ದೇಶ ದೇಶವನ್ನು ಬ್ರಷ್ಟರಿಂದ ರಕ್ಷಿಸುತ್ತಿರುವ ಮೋದಿಯವರನ್ನು ಸೋಲಿಸುವುದು. ಈ ಒಂದು ಕಾರಣಕ್ಕಾಗಿ ಅವರೆಲ್ಲ ಒಟ್ಟಾಗಿದ್ದಾರೆ ಎಂದು ರವಿ ಕಿಡಿಕಾರಿದರು.
ಜೆಡಿಎಸ್‌ಗೆ ರಾಜ್ಯದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ ಇದರಿಂದ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವುದರಿ0ದ ಬಿಜೆಪಿಗೆ ಲಾಭವಾಗಲಿದೆ. ಹಿಂದೆ ನಡೆದ 14 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ ಮುಂದೆ ನಡೆಯಲಿರುವ ಕ್ಷೇತ್ರದಲ್ಲೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್,ಮಂಡಳ ಅಧ್ಯಕ್ಷ ತಿಮ್ಮಪ್ಪ ಮಡಿವಾಳ,ತೋಟಪ್ಪ ನಾಯ್ಕ ಉಪಸ್ಥಿತರಿದ್ದರು.
ನಂತರ ಸಿ.ಟಿ.ರವಿ ಕಾರ್ಯಕರ್ತರ ಸಭೆ ನಡೆಸಿದರು.

About the author

Adyot

Leave a Comment