ಆದ್ಯೋತ್ ನ್ಯೂಸ್ ಡೆಸ್ಕ್ : ಪ್ರಧಾನಮಂತ್ರಿಗಳು ಕೈಗೊಂಡಿರುವ ಲಾಕ್ ಡೌನ್ ನಿರ್ಧಾರ ಕೊರೊನಾ ನಿಯಂತ್ರಣದಲ್ಲಿ ಮಹತ್ವದ ಹೆಜ್ಜೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಆದ್ಯೋತ್ ನ್ಯೂಸ್ ಗೆ ಸಂದರ್ಶನ ನೀಡಿದ ಶ್ರೀಗಳು, ಪ್ರಧಾನಮಂತ್ರಿಗಳ ನಿರ್ಧಾರಕ್ಕೆ ನಾವೆಲ್ಲ ಸ್ಪಂದಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ನಮಗೆ ಯಾವ ರೋಗಗಳೂ ಬರೋದಿಲ್ಲ ಅನ್ನೋ ಭ್ರಮೆಯಿಂದ ಹೊರಬರಬೇಕು. ಸರ್ಕಾರಗಳು ಕೈಗೊಂಡ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾವೇ ಬಾಗಿಲು ತೆಗೆದು ರೋಗಗಳಿಗೆ ಆಮಂತ್ರಣ ಕೊಡಬಾರದು. ಸೊಷ್ಯಲ್ ಡಿಸ್ಟನ್ಸಿಂಗ್, ಸೇಫ್ ಡಿಸ್ಟನ್ಸಿಂಗ್ ಅನುಸರಿಸೋಣ. ಲಾಕ್ ಡೌನ್ ಅನ್ನೋದು ತುಂಬಾ ಸುಲಭ. ಏಕೆಂದರೆ ಕೊರೊನಾ ಬಂದು ನಾವು ಕಷ್ಟಪಡುವುದಕ್ಕಿಂತ, ಕ್ವಾರಂಟೈನ್ ನಲ್ಲಿ, ಐಸೋಲೇಶನ್ ನಲ್ಲಿ ಇರುವುದಕ್ಕಿಂತ ನಮ್ಮ ಪಾಡಿಗೆ ನಾವು ಮನೆಯಲ್ಲಿ ಇರುವುದು ತುಂಬಾ ಸುಲಭ. ಸರ್ಕಾರಗಳ ಸೂಚನೆಗಳನ್ನು ಪಾಲಿಸೋ ಮೂಲಕ ನಾವೂ ಬಚಾವಾಗೋಣ. ನಮ್ಮವರನ್ನೂ ಬಚಾವ್ ಮಾಡೋಣ. ದೇಶವನ್ನೂ ಉಳಿಸೋಣ ಎಂದರು.