ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಪದ ಮತ್ತು ಪಾರಂಪರಿಕ ವೈದ್ಯ ಸಂಘದವರು ಆಯೋಜಿಸಿದ್ದ ಔಷಧಿ ಸಸ್ಯಗಳ ವನಮಹೋತ್ಸವ ಕಾರ್ಯಕ್ರಮವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿಯವರು,
ಪಾರಂಪರಿಕ ಹಾಗೂ ನಾಟಿ ವೈದ್ಯರು ವೈದ್ಯಕೀಯವನ್ನು ಸೇವೆಯ ರೂಪದಲ್ಲಿ ನೀಡುತ್ತಿದ್ದಾರೆಯೇ ಹೊರತು ಆದಾಯದ ಮೂಲ ಎಂದು ಮಾಡುತ್ತಿಲ್ಲ.
ಪ್ರದಾನಿ ನರೇಂದ್ರ ಮೋದಿಯವರು ಸ್ವಾವಲಂಬಿಯಾಗುವ ಬಗ್ಗೆ ಆತ್ಮನಿರ್ಭರದ ಬಗ್ಗೆ ಹೇಳಿದ್ದಾರೆ ಇದನ್ನು ಕೇವಲ ನಾವು ತಂತ್ರಜ್ಞಾನಕ್ಕೆ ಸೀಮಿತಗೊಳಿಸಬಾರದು ಎಲ್ಲಾ ಕ್ಷೇತ್ರಗಳಲ್ಲೂ ನಾವು ಸ್ವಾವಲಂಬಿಗಳಾದರೆ ಮತ್ತೆ ಜಗತ್ತಿನಲ್ಲಿ ಭಾರತ ಗುರುವಿನ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಎಲ್ಲ ರೋಗಗಳಿಗೂ ನಮ್ಮ ಪಾರಂಪರಿಕ ಆಯುರ್ವದ ಪದ್ದತಿಯಲ್ಲಿ ಔಷಧವಿದೆ ಅದನ್ನು ಗುರುತಿಸಿ ಉಳಿಸುವ ಕೆಲಸವಾಗಬೇಕು ನಾಟಿ ವೈದ್ಯರು ತಮ್ಮ ಔಷಧ ಮೂಲದ ಬಗ್ಗೆ ತಮ್ಮ ಕುಟುಂಬದವರಿಗಾದರೂ ತಿಳಿಸಬೇಕು. ಅಥವಾ ಔಷಧ ದಾಖಲೀಕರಣ ಮಾಡಬೇಕು. ನವಗ್ರಹವನ,ನಕ್ಷತ್ರವನ ಪ್ರತಿ ಗ್ರಾಮದಲ್ಲೂ ಆಗಬೇಕು ಅರಣ್ಯ ಇಲಾಖೆಯವರು ಔಷಧ ವನಗಳನ್ನು,ಹಣ್ಣುಗಳ ವನವನ್ನು ನಿರ್ಮಾಣ ಮಾಡಬೇಕು ಇದರಿಂದ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬಹುದು ಎಂದು ಹೇಳಿದರು.
ಈಗಾಗಲೇ ನಾಟಿ ವೈದ್ಯರು ತಮಗೆ ಸರಕಾರಿ ಮಾನ್ಯತೆಯನ್ನು ಕೊಡಬೇಕು ಎಂದು ಕೇಳಿದ್ದಾರೆ ಈ ಬಗ್ಗೆ ಕಳೆದ ಮೂರು ತಿಂಗಳ ಹಿಂದೆ ಆಯುಷ್ ಇಲಾಖೆಯವರ ಜೊತೆಗೆ ಮಾತನಾಡಲಾಗಿದೆ ಸರಕಾರಿ ವ್ಯವಸ್ಥೆಯಲ್ಲಿ ಕೆಲವು ನಿಯಮಗಳ ಬದಲಾವಣೆಯಾಗಬೇಕಿದೆ ಇಂಗ್ಲೀಷ್ ಔಷಧದಂತೆ ನಮ್ಮ ಔಷಧಗಳ ಪ್ರಯೋಗ ಮಾಡಲು ಬರುವುದಿಲ್ಲ ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶ್ರಮ ಅನ್ನೋದು ಜೀವನದಲ್ಲಿ ಪ್ರಮುಖವಾದುದು. ಶ್ರಮವಿಲ್ಲದೇ ಯಾರೂ ಮುಂದು ಬರಲು ಸಾಧ್ಯವಿಲ್ಲ. ನಾನೂ ಕೂಡ ತುಂಬಾ ಶ್ರಮವನ್ನು ಹಾಕಿಯೇ ಈ ವಿಧಾನಸಭಾಧ್ಯಕ್ಷ ಹುದ್ದೆ ಅಲಂಕರಿಸಿದ್ದೇನೆ ಸಸ್ಯಗಳನ್ನು ನೆಡೋದು ಸುಲಭ. ಆದ್ರೆ ಅದನ್ನ ಬೆಳೆಸೋಕೆ ಶ್ರಮ ಬೇಕು. ರಾಜಕೀಯದಲ್ಲಿ ಶ್ರಮ ಇಲ್ಲದೆ ಮೇಲೆ ಬರೋಕೆ ಸಾಧ್ಯವಿಲ್ಲ.ನಾನೂ ಕೂಡ
ಶ್ರಮವಿಲ್ಲದೆ ರಾಜಕೀಯದಲ್ಲಿ ಮುಂದೆ ಬಂದು ಸಭಾಧ್ಯಕ್ಷ ಆಗಿದ್ದೀನಿ ಅನ್ಕೊಂಡ್ರಾ? ನಾನೂ ಕೂಡ ಶ್ರಮ ಪಟ್ಟೇ ಈ ಗಾದಿಗೆ ಬಂದಿರೋದು. ಆದ್ದರಿಂದ ಎಲ್ಲದಕ್ಕೂ ಶ್ರಮಪಡಲೇಬೇಕು. ಈ ಪಾರಂಪರಿಕ ವೈದ್ಯರ ಸಂಘಗಳು ಎಷ್ಟೋ ಜನರಿಗೆ ಸಂಜೀವಿನಿಯಾಗಿದ್ದಾರೆ. ಈ ಪರಂಪರೆಯನ್ನು ನಾವು ಉಳಿಸಿ, ರಕ್ಷಿಸಿಕೊಂಡು ಹೋಗಬೇಕಾಗಿದೆ.
ನಾವು ಮುಂದುವರಿದ ದೇಶಗಳನ್ನು ನೋಡಿದ್ರೂ ಕೂಡ ಕೊರೊನಾ ರೋಗಕ್ಕೆ ಔಷಧಿ ಕಂಡುಹಿಡಿಯೋಕೆ ಸಾಧ್ಯವಾಗ್ತಿಲ್ಲ. ಆದ್ರೆ ಪುರಾತನ ಕಾಲದ ಚರಕ, ಸುಶ್ರುತರು ಯಾವುದೇ ಸಲಕರಣೆಗಳ ಸಹಾಯವಿಲ್ಲದೆ ಎಷ್ಟೋ ಶಸ್ತ್ರಚಿಕಿತ್ಸೆಗಳನ್ನ ಯಶಸ್ವಿಯಾಗಿ ಮಾಡಿದ್ದರು. ಆದ್ದರಿಂದ ಈ ಪಾರಂಪರಿಕ ವೈದ್ಯ ಸಂಘಗಳ ಅವಶ್ಯಕತೆ ತುಂಬಾ ಇದೆ ಎಂದು ಕಾಗೇರಿ ಹೇಳಿದರು
ಪ್ರಾಸ್ತಾವಿಕ ಮಾತನಾಡಿದ ಸಂಘದ ಕಾರ್ಯದರ್ಶಿ ವಿಶ್ವನಾಥ ಹೆಗಡೆ,ಜಿಲ್ಲೆಯ ಪ್ರತಿಗ್ರಾಮದಲ್ಲೂ ನಾಟಿ ವೈದ್ಯರಿದ್ದರು ಅವರನ್ನು ಗುರುತಿಸುವ ಕೆಲಸವನ್ನು ಸಂಘ ಮಾಡುತ್ತಿದೆ. ಕಳೆದ ನಂವಂಬರ ತಿಂಗಳಲ್ಲಿ ಪ್ರಾರಂಭವಾದ ನಮ್ಮ ಸಂಘ ಪಾರಂಪರಿಕ ವೈದ್ಯರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ಖಾಯಿಲೆಗೂ ಔಷಧ ಕೊಡುವವರು ಹಾಗೂ ಒಂದೇ ಖಾಯಿಲೆಗೆ ಔಷಧ ಕೊಡುವವರು ಎಲ್ಲರೂ ಪಾರಂಪರಿಕ ವೈದ್ಯರೇ ಆಗಿದ್ದಾರೆ. ಸಿದ್ದಾಪುರದಲ್ಲಿ ಸುಮಾರು 180 ನಾಟಿ ವೈದ್ಯರಿದ್ದಾರೆ. ಹತ್ತಾರು ವೈದ್ಯ ಮನೆತನವೇ ಇಲ್ಲಿದೆ ಪಾರಂಪರಿಕ ವೈದ್ಯಕೀಯದಲ್ಲಿ ಆಧ್ಯಾತ್ಮ ಹಾಗೂ ರಾಷ್ಟ್ರಭಕ್ತಿ
ಯು ಸೇರಿದೆ ಇಂತಹ ವೈದಯ ಪದ್ದತಿಯನ್ನು ಉಳಿಸುವ ಕೆಲಸವಾಗಬೇಕು ಸಂಘಟನೆ ಇಲ್ಲದೆ ಯಾವುದೂ ಸಾಧ್ಯವಿಲ್ಲ ಆದ್ದರಿಂದ ಸಂಘಟನೆಯನ್ನು ಬೆಳೆಸು ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎಸ್.ಎಂ.ಹೆಗಡೆ,ತಾಪಂ ಅಧ್ಯಕ್ಷ ಸುಧೀರ್ ಗೌಡರ್,ಹಿರಿಯ ರಂಗಕರ್ಮಿ ಶ್ರೀಧರ ಹೆಗಡೆ ಹುಲಿಮನೆ, ಮುಂತಾದವರು ಉಪಸ್ಥಿತರಿದ್ದರು.