ಅಪರೂಪದ ಚಿಪ್ಪುಹಂದಿ ಚಿಪ್ಪು ಮಾರಾಟಕ್ಕೆ ಯತ್ನ ಇಬ್ಬರ ಬಂಧನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಅವನತಿಯ ಅಂಚಿನಲ್ಲಿರುವ ಬಲುಅಪುರೂಪದ ಚಿಪ್ಪುಹಂದಿಯ ಚಿಪ್ಪು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರೂ ಆರೊಪಿಗಳನ್ನು ಪಿಎಸ್‍ಐ ಮಂಜುನಾಥ ಬಾರ್ಕಿ ಹಾಗೂ ಸಿಬ್ಬಂದಿಗಳು ಬಂಧಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ರವಿವಾರ ನಡೆದಿದೆ.
ಚಿಪ್ಪುಹಂದಿಯು ಶೆಡ್ಯೂಲ್-1 ಪ್ರಾಣಿಯಾಗಿದ್ದು ಅವನತಿಯ ಅಂಚಿನಲ್ಲಿರುವ ಪ್ರಾಣಿಯಾಗಿರುತ್ತದೆ.ಆರೋಪಿಗಳು ತಾಲೂಕಿನ ಬಸವನಬೈಲ್‍ನ ನಾಗಭೂಷಣ ರಾಮಕೃಷ್ಣ ನಾಯ್ಕ ಹಾಗೂ ಬೇಡ್ಕಣಿ ಯೋಗೇಶ ಕೃಷ್ಣ ನಾಯ್ಕ ಆಗಿದ್ದು ಅರಣ್ಯ ಇಲಾಖೆಯವರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಸೆಕ್ಷನ್ 9,38,40,48ಎ,49,50 ಹಾಗೂ51ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಧೀಶರ ಎದುರು ಹಾಜರಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ,ಪಿಎಸ್‍ಐ ಮಂಜುನಾಥ ಬಾರ್ಕಿ,ಉಪವಲಯಅರಣ್ಯಾಧಿಕಾರಿ ಮಂಜುನಾಥ ಹುಲ್ಲೂರು,ಶಶಿಧರ ಎಲ್.ಜಿ.,ಸಂತೋಷ ವಿ.ಶೆಟ್ಟಿ,ಉಪಸ್ಥಿತರಿದ್ದರು.

About the author

Adyot

Leave a Comment