ಸಿದ್ದಾಪುರ : ತಾಲೂಕಿನ ಸುಪ್ರಸಿದ್ಧ ಬಿಳಗಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಜನವರಿ 28 ರಿಂದ ಫೆಬ್ರವರಿ 5 ರ ವರೆಗೆ ಜರುಗಲಿದೆ.
ಈ ಸಲ ನಡೆಯುವ ಜಾತ್ರೆಯನ್ನ ವಿಶೇಷವಾದ ಕಾನ್ಸೆಪ್ಟ್, “ಸುಂದರ ಪರಿಸರ ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಜಾತ್ರೆ” ಮಾಡೋ ಮೂಲಕ ಮುಂದೆ ನಡೆಯೋ ಇತರ ಜಾತ್ರೆಗಳಿಗೆ ಮಾದರಿಯನ್ನಾಗಿಸಲು ಆಡಳಿತ ಮಂಡಳಿ ಪಣ ತೊಟ್ಟಿದೆ.
ಪ್ರಧಾನಿ ಮೋದಿಯವರ ಈ ಸಲದ ಪ್ಲಾಸ್ಟಿಕ್ ಮುಕ್ತ ಭಾರತ ಅನ್ನೋ ಘೋಷಣೆ ಈ ಕಾನ್ಸೆಪ್ಟ್ ಗೆ ಸ್ಫೂರ್ತಿಯಾಗಿದೆ. ಈ ವರ್ಷದ ಜಾತ್ರೆಯಲ್ಲಿ ಪ್ರಥಮವಾಗಿ ವರಾಡ್ ಪೂಜೆ ಅನ್ನೋದನ್ನ ಜಾರಿಗೆ ತರಲಾಗಿದ್ದು 4000 ಕುಟುಂಬಗಳಿಗೆ ಬಟ್ಟೆ ಚೀಲದಲ್ಲೇ ಪ್ರಸಾದ ವಿತರಣೆ ನಡೆಯಲಿದೆ.
ವಾಹನಗಳ ಪಾರ್ಕಿಂಗ್ ಗಾಗಿ ಜಾಗಗಳನ್ನು ಗುರುತಿಸಲಾಗಿದ್ದು, ವಿಶೇಷ ಪಾರ್ಕಿಂಗ್ ಪಡೆ ರಚನೆ ಮಾಡಲಾಗಿದೆ.
ಜಾತ್ರಾ ಮೈದಾನದಲ್ಲಿ ಸಿಸಿಟಿವಿ ಅಳವಡಿಕೆ ಮಾಡೋದರ ಮೂಲಕ ಪಾರದರ್ಶಕ ಹಾಗೂ ರಕ್ಷಣೆಗೆ ಅನುಕೂಲಕರ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಸ್ವಚ್ಛತೆಯ ಕಡೆ ಹೆಚ್ಚಿನ ಗಮನ ಹರಿಸಲಾಗಿದ್ದು, ಮುಜರಾಯಿ ಸಚಿವರು ಭಾಗಿಯಾಗೋ ಸಾಧ್ಯತೆ ಇದೆ. ಈ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸರ್ಕಾರದ ಭಾಗೀದಾರಿಕೆಯನ್ನ ನಿರೀಕ್ಷಿಸಲಾಗಿದೆ.
ಈಗಾಗಲೇ ಮನೋರಂಜನಾ ಆಟಗಳು ಹಾಗೂ ಅಂಗಡಿಗಳು ಬಂದಿದ್ದು, ಜಾತ್ರಾ ಗದ್ದುಗೆ ಮಂಟಪ ಆಕರ್ಷಕ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.