ಆದ್ಯೋತ್ ನ್ಯೂಸ್ ಡೆಸ್ಕ್ : ಕಳೆದ ಎರಡು ತಿಂಗಳಿನಿಂದ ಯಾವುದೇ ಅಸ್ತ್ರ- ಶಸ್ತ್ರಗಳನ್ನು ಬಳಸದೆ ಜಗತ್ತನ್ನು ನಡುಗಿಸುತ್ತಿರುವ ಕೊರೊನಾ ವೈರಸ್ ಗೆ ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್-19 ಎಂದು ಮರುನಾಮಕರಣ ಮಾಡಿದೆ.
ಚೀನಾದಲ್ಲಿ ಇಲ್ಲಿಯವರೆಗೆ 1187 ಜನರನ್ನು ಬಲಿ ತೆಗೆದು ಕೊಂಡಿರುವ ಈ ರೋಗ ಜಗತ್ತಿನ 25 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಈ ರೋಗಕ್ಕೆ ಇಲ್ಲಿಯವರೆಗೆ ಯಾವುದೇ ಔಷಧವನ್ನು ಕಂಡುಹಿಡಿಯಲಾಗಿಲ್ಲ. ಆದರೆ ಈಗಾಗಲೇ ಈ ರೋಗಕ್ಕೆ ಔಷಧ ಕಂಡುಹಿಡಿಯುವ ಪ್ರಯತ್ನ ನಡೆದಿದ್ದು, ಇನ್ನು 18 ತಿಂಗಳಲ್ಲಿ ಔಷಧ ನೀಡಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತ್ಮವಿಶ್ವಾಸದಿಂದ ಹೇಳಿದೆ. ಆದರೆ ಅಲ್ಲಿಯವರೆಗೆ ಈ ಮಹಾಮಾರಿಗೆ ಬಲಿಯಾಗುವವರು ಎಷ್ಟೋ?
ಈ ವೈರಸ್ ಜಗತ್ತಿಗೆ ಹೊಸದಲ್ಲ. 1969ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಈ ವೈರಸ್ ನಂತರದ ದಿನದಲ್ಲಿ ಸಾಸ್೯, ಎಚ್.ಸಿ.ಓ.ವಿ, ಎಚ್.ಕೆ.ಯು.ಐ, ಎ.ಎಮ್.ಎಸ್ ಹೀಗೆ ಬೇರೆ ಬೇರೆ ರೂಪದಲ್ಲಿ ಮನುಷ್ಯರ ನಿದ್ದೆಗೆಡಿಸುತ್ತಿದೆ. 2003ರಲ್ಲಿ ಸಿವಿಯರ್ ಅಕ್ಯೂಟ್ ರೆಸ್ಟಿರೇಟರಿ ಸಿಂಡೊಮ್ ಎಂಬ ಹೆಸರಿದ ಕರೆಯಲಾಗಿದ್ದ ಈ ವೈರಸ್ ಚೀನಾದಲ್ಲಿ 8000ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡು ಸುಮಾರು 500ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. 2012ರಲ್ಲಿ ಸೌದಿಅರೆಬಿಯಾದಲ್ಲಿ ಕಾಣಿಸಿದ ಈ ವೈರಸ್ ಗೆ 100ಕ್ಕೂ ಹೆಚ್ಚು ಜನರು ಮರಣಹೊಂದಿದ್ದರು. ಈಗ ಪುನಃ 2019 ರಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡು ಜಗತ್ತಿನ ಬೇರೆ ಬೇರೆ ಭಾಗಕ್ಕೆ ತನ್ನ ಕಬಂಧಬಾಹುವನ್ನು ಚಾಚುತ್ತಿದೆ.
ಮಹಾಮಾರಿ ಕರೋನಾಗೆ ಆದಷ್ಟು ಬೇಗ ಔಷಧ ಕಂಡುಹಿಡಿಯುವಂತಾಗಲಿ.