ಐ.ಎನ್.ಎಸ್ ಶಿವಾಜಿಗೆ ಒಲಿದ ‘ಪ್ರೆಸಿಡೆಂಟ್ಸ್ ಕಲರ್ಸ್’

ಆದ್ಯೋತ್ ನ್ಯೂಸ್ ಡೆಸ್ಕ್ : ಭಾರತೀಯ ನೌಕಾಪಡೆಯ ಐ.ಎನ್.ಎಸ್ ಶಿವಾಜಿಗೆ ರಾಷ್ಟ್ರಪತಿಗಳ ‘ಪ್ರೆಸಿಡೆಂಟ್ಸ್ ಕಲರ್ಸ್’ ಗೌರವ ಪ್ರಶಸ್ತಿ ದೊರೆತಿದೆ.


ಭಾರತೀಯ ನೌಕಾ ಪಡೆ, ತಟರಕ್ಷಕ ದಳ, ರಕ್ಷಣಾ ದಳ ಹಾಗೂ ಪ್ಯಾರಾ ಮಿಲಿಟರಿ ಫೋರ್ಸ್ ಗಳಿಗೆ ನುರಿತ ಆಫೀಸರ್ಸ್ ಗಳಿಗೆ ಶಿಕ್ಷಣ ಹಾಗೂ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯೇ ಐ.ಎನ್.ಎಸ್ ಶಿವಾಜಿ. ಈ ಯುನಿಟ್ ಗೆ ಸಿಕ್ಕಿರೋ ಪ್ರೆಸಿಡೆಂಟ್ಸ್ ಕಲರ್ಸ್ ಪ್ರಶಸ್ತಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಯುನಿಟ್ ಗೆ ನೀಡಿರುವ ಒಂದು ಅತ್ಯುನ್ನತ ಗೌರವವಾಗಿದೆ. ಎಚ್.ಎಂ.ಐ.ಎಸ್ ಶಿವಾಜಿ ಅನ್ನುವ ಈ ಯುನಿಟ್ 15 ಫೆಬ್ರವರಿ 1945 ರಲ್ಲಿ ಮಹಾರಾಷ್ಟ್ರದ ಲೋನವಾಲಾ ದಲ್ಲಿ ನಿರ್ಮಿತವಾಗಿ ನಂತರ 26 ಜನವರಿ 1950 ರಂದು ಐ.ಎನ್. ಎಸ್ ಶಿವಾಜಿ ಎಂದು ಮರುನಾಮಕರಣವಾಯಿತು. ದೇಶಕ್ಕೆ ಐ.ಎನ್.ಎಸ್ ಶಿವಾಜಿ ನೀಡುತ್ತಿರೋ ಸೇವೆಯನ್ನ ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಲೋನಾವಾಲದಲ್ಲಿ ನಡೆದ ಸಮಾರಂಭದಲ್ಲಿ ಈ ವಿಶೇಷ ಗೌರವವನ್ನ ಪ್ರಧಾನ ಮಾಡಿದ್ದಾರೆ.

About the author

Adyot

Leave a Comment