ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಖ್ಯಾತ ಬಂಡಾಯ ಸಾಹಿತಿ,ಚಿಂತಕ, ಸಹಯಾನ ಸಂಘಟನೆಯ ಕಾರ್ಯದರ್ಶಿ,ಉಪನ್ಯಾಸಕ ಡಾ.ವಿಠ್ಠಲ ಭಂಡಾರಿ(50) ಶುಕ್ರವಾರ ಕೊವಿಡ್ ಗೆ ಬಲಿಯಾಗಿದ್ದಾರೆ.
ಕಳೆದ ಹತ್ತು ದಿನದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಂಡಾರಿಯವರಿಗೆ 5 ದಿನದಿಂದ ವೆಂಟಿಲೆಟರ್ ಅಳವಡಿಸಲಾಗಿತ್ತು ಎಂದು ತಿಳಿದು ಬಂದಿದೆ.
ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದವರಾಗಿದ್ದ ಡಾ.ವಿಠ್ಠಲ ಭಂಡಾರಿಯವರು ಸಿದ್ದಾಪುರದ ಎಂಜಿಸಿ ಕಾಲೇಜ್ ನಲ್ಲಿ ಉಪನ್ಯಾಸಕರಾಗಿದ್ದರು.ಸಾಹಿತಿಗಳು,ಸಾಮಾಜಿಕ,ಪರಿಸರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು.
ಇತ್ತೀಚೆಗೆ ಹಲವು ಸಂಘಟನೆಯ ಜೊತೆಗೂಡಿ ರಾಜ್ಯಾದ್ಯಂತ “ಸಂವಿಧಾನ ಓದು” ಕಾರ್ಯಕ್ರಮ ನಡೆಸಿದ್ದರು. ಯಕ್ಷಗಾನ ಬಗ್ಗೆ ಆಸಕ್ತಿಯುಳ್ಳವರಾಗಿದ್ದ ಇವರು ತಾಳಮದ್ದಲೆಯ ಅರ್ಥಧಾರಿಗಳು ಆಗಿದ್ದರು.
ಪರಿಸರ ಸಂಬಂಧಿಸಿದ ಸಾಹಿತ್ಯವನ್ನು,ಪ್ರಭುದ್ಧ ಲೇಖನವನ್ನು ಬರೆದಿದ್ದಾರೆ.ಪುಸ್ತಕ ಪ್ರಕಾಶಕರೂ ಆಗಿದ್ದ ಭಂಡಾರಿಯವರು ಜಿಲ್ಲೆಯ ಅನೇಕ ಜನಪರ ಹೋರಾಟಗಳನ್ನು ರೂಪಿಸಿದ್ದರು.
#####
ಜಿಲ್ಲೆಯಲ್ಲಿ ಶುಕ್ರವಾರ 833ಕೊವಿಡ್ ಪ್ರಕರಣಗಳು ದಾಖಲಾಗಿದ್ದು 12 ಜನರು ಸಾವಿಗೀಡಾಗಿದ್ದಾರೆ.4842ಸಕ್ರೀಯ ಪ್ರಕರಣಗಳಿದ್ದು ಇಲ್ಲಿಯವರೆಗೆ 264 ಜನರು ಕೊವಿಡ್ ನಿಂದ ಸಾವಿಗೀಡಾಗಿದ್ದಾರೆ.
ಸಿದ್ದಾಪುರದಲ್ಲಿ ಇಂದು-72 ಕೊವಿಡ್ ಪ್ರಕರಣಗಳು ದಾಖಲಾಗಿದ್ದು 425 ಸಕ್ರೀಯಪ್ರಕರಣಗಳು ಇವೆ ಆಸ್ಪತ್ರೆಯಲ್ಲಿ 25 ಜನರಿದ್ದು 382 ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 13 ಜನರು ಕೊವಿಡ್ ನಿಂದ ಮರಣ ಹೊಂದಿದ್ದಾರೆ.