ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದ್ದು ಇಂದು713 ಪ್ರಕರಣಗಳು ದಾಖಲಾಗಿದ್ದು 6157 ಸಕ್ರೀಯ ಪ್ರಕರಣ ದಾಖಲಾಗಿದೆ ಇಂದು 9 ಜನರು ಕೊವಿಡ್ ನಿಂದ ಮೃತರಾಗಿದ್ದಾರೆ ಜಿಲ್ಲೆಯಲ್ಲಿ ಒಟ್ಟೂ 298 ಜನರು ಮೃತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಗೆ ಕೊವಿಡ್ ಕಾಣಿಸಿಕೊಂಡಿದೆ.ರೋಗ ಲಕ್ಷಣ ಇದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪರೀಕ್ಷೆ ಮಾಡಿಸಿದ್ದರು.ಕೊವಿಡ್ ಧೃಡಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ.
ಸಿದ್ದಾಪುರದಲ್ಲಿ 84 ಜನರಿಗೆ ಕೊವಿಡ್ ಕಾಣಿಸಿಕೊಂಡಿದ್ದು ಒಟ್ಟೂ 535 ಸಕ್ರೀಯ ಪ್ರಕರಣಗಳಿವೆ 3ಜನರು ಮೃತಪಟ್ಟಿದ್ದಾರೆ ಒಟ್ಟೂ18 ಜನರು ಇಲ್ಲಿಯವರೆಗೆ ಮೃತರಾಗಿದ್ದಾರೆ.