ಶಿರಸಿ : ಕರ್ನಾಟಕದ ಅತಿ ದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಗದ್ದುಗೆಯಿಂದ ತಾಯಿ ಮಾರಿಕಾಂಬೆ ನಿರ್ಗಮನದೊಂದಿಗೆ ಜಾತ್ರೆ ಮುಕ್ತಾಯವಾಗಿದೆ.
ಕಳೆದ 9 ದಿನಗಳಿಂದ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದ ದೇವಿಗೆ ಸ್ವಾಮೀಜಿಗಳು, ಜನಪ್ರತಿನಿಧಿಗಳು ವಿಶೇಷ ಪೂಜೆ ಸಲ್ಲಿಸಿದರು. ಲಕ್ಷೋಪಲಕ್ಷ ಜನ ದೇವಿಯ ದರ್ಶನ ಪಡೆದರು. ಗದ್ದುಗೆಯಿಂದ ನಿರ್ಗಮನದ ಮೊದಲು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕುಂಬಳಕಾಯಿಯನ್ನು ಒಡೆಯೋ ಮೂಲಕ ಬಲಿ ನೀಡಲಾಯಿತು. ನಂತರ ಗದ್ದುಗೆಯಿಂದ ಹೊರಟ ಮಾರಿಕಾಂಬೆ ರಥದ ಹತ್ತಿರ ಬಂದಾಗ ಮಾತಂಗಿ ಚಪ್ಪರವನ್ನ ಸುಡಲಾಯಿತು. ಈ ದೃಶ್ಯವನ್ನ ಹಿಂತಿರುಗಿ ನೋಡಿದ ತಾಯಿ ಮಾರಿಕಾಂಬೆಯನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ಪಾಲ್ಗೊಂಡು ದೇವಿಯ ದಿವ್ಯ ದರ್ಶನವನ್ನು ಕಣ್ತುಂಬಿಕೊಂಡರು.
ಒಳ್ಳೆಯ ಸಕಾಲಿಕ ಸುದ್ದಿ. ಅಭಿನಂದನೆಗಳು.