“ಓಂ ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೆ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋನಮಃ”
****** ****** ##### ****** *****
ಮಾಚ್೯ 25 ರಂದು ಯುಗಾದಿ ಪಾಡ್ಯವಾಗಿದ್ದು ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷ ಪ್ರಾರಂಭವಾಗುತ್ತಿದೆ. ವಿಕಾರಿ ಸಂವತ್ಸರವು ಮುಗಿದು ಶಾರ್ವರಿ ಸಂವತ್ಸರ ಪ್ರಾರಂಭವಾಗುತ್ತದೆ.
ಧ್ವಾಂಕ್ಷ್ಯ ಎಂಬ ಕಾಲಪುರುಷನು ಚೈತ್ರ ಮಾಸ ಕೃಷ್ಣ ಪಕ್ಷ ಸಪ್ತಮಿ ಸೋಮವಾರ ರಾತ್ರಿ 8-31ಕ್ಕೆ ಮೇಷ ಸಂಕ್ರಾಂತಿಯನ್ನು ಪ್ರವೇಶಿಸಲಿದ್ದಾನೆ. ಕಾಲಪುರುಷನು ಕುದುರೆಯ ಮೇಲೆ ಕುಳಿತು ಈಶಾನ್ಯ ದಿಕ್ಕನ್ನು ನೋಡುತ್ತ ಉತ್ತರ ದಿಕ್ಕಿಗೆ ಹೋಗುತ್ತಾನೆ. ಈಶಾನ್ಯ ದಿಕ್ಕಿನಿಂದ ಜಗತ್ತಿಗೆ ಅಪಾಯ ಬರಲಿದೆ. ಹಿಮಪಾತ, ಅತಿವೃಷ್ಟಿ ಆಗಲಿದೆ, ಮಳೆ ಮತ್ತು ಚಳಿಯಿಂದ ಅಪಾರ ಜೀವ ಹಾನಿಯಾಗಲಿದೆ. ಉತ್ತಮ ಬೆಳೆ ಬಂದರೂ ರೋಗ-ರುಜಿನಗಳಿಂದ ಹಾಳಾಗಲಿದೆ. ಅಕ್ಕಿ, ಜೋಳ ಸೇರಿದಂತೆ ಒಂದಿಷ್ಟು ದವಸ-ಧಾನ್ಯಗಳ ಬೆಲೆ ಏರಲಿದೆ. ಚಿಂತಾಮುಖನಾಗಿರುವುದರ ಜೊತೆಗೆ ದಕ್ಷಿಣ ದಿಕ್ಕಿನಿಂದ ಬಂದಿರುವುದರಿಂದ ಸಾವು-ನೋವು ಹೆಚ್ಚಾಗಲಿದೆ. ಈ ಅಪಾಯ ನಿವಾರಣೆಗೆ ಮೃತ್ಯುಂಜಯ ರುದ್ರ ಹಾಗೂ ಗದಾಧರ ಮಹಾವಿಷ್ಣುವಿನ ಆರಾಧನೆ ಮಾಡುವುದು ಒಳ್ಳೆಯದು.
***** ***** ***** ### ***** ***** *****
ಸಂವತ್ಸರದ ಪ್ರಮುಖ ಹಬ್ಬಗಳು –
25-03-2020, ಬುಧವಾರ – ಯುಗಾದಿ
02-04-2020, ಗುರುವಾರ – ಶ್ರೀರಾಮನವಮಿ
09-04-2020, ಗುರುವಾರ – ಶ್ರೀ ಶ್ರೀಧರಸ್ವಾಮಿಗಳ ಆರಾಧನೆ
26-04-2020, ರವಿವಾರ – ಅಕ್ಷಯತೃತೀಯಾ
01-07-2020, ಬುಧವಾರ – ಪ್ರಥಮ ಏಕಾದಶಿ
05-07-2020, ರವಿವಾರ – ಗುರುಪೂರ್ಣಿಮೆ
20-07-2020, ಸೋಮವಾರ – ಭೀಮನ ಅಮವಾಸ್ಯೆ
25-07-2020, ಶನಿವಾರ – ನಾಗರಪಂಚಮಿ
03-08-2020, ಸೋಮವಾರ – ನೂಲುಹುಣ್ಣಿಮೆ
11-08-2020, ಮಂಗಳವಾರ – ಕೃಷ್ಣಾಷ್ಟಮಿ
16-08-2020, ರವಿವಾರ – ಸಿಂಹಸಂಕ್ರಾಂತಿ
21-08-2020, ಶುಕ್ರವಾರ – ಗೌರಿತದಿಗೆ
22-08-2020, ಶನಿವಾರ – ಗಣೇಶಚತುರ್ಥಿ
23-08-2020, ರವಿವಾರ – ಋಷಿಪಂಚಮಿ
01-09-2020, ಮಂಗಳವಾರ – ಅನಂಚತುದರ್ಶಿ
17-10-2020, ಶನಿವಾರ – ನವರಾತ್ರಿ ಪ್ರಾರಂಭ
21-10-2020, ಬುಧವಾರ – ಶಾರದಾ ಸ್ಥಾಪನೆ
24-10-2020, ಶನಿವಾರ – ದುರ್ಗಾಷ್ಟಮಿ, ಮಹಾನವಮಿ, ಶಾರದಾವಿಸರ್ಜನೆ
25-10-2020, ರವಿವಾರ – ವಿಜಯದಶಮಿ
31-10-2020, ಶನಿವಾರ – ಭೂಮಿಪೂಜೆ
09-11-2020, ಸೋಮವಾರ – ಗಂಗಾಪೂಜೆ
14-11-2020, ಶನಿವಾರ – ನರಕಚತುದರ್ಶಿ, ಲಕ್ಷ್ಮೀಪೂಜಾ
15-11-2020, ರವಿವಾರ – ಬಲಿಪೂಜಾ
26-11-2020, ಗುರುವಾರ – ತುಲಸಿಪೂಜಾ
20-12-2020, ರವಿವಾರ – ಚಂಪಾಷಷ್ಠಿ
29-12-2020, ಮಂಗಳವಾರ – ದತ್ತಜಯಂತಿ
14-01-2021, ಗುರುವಾರ – ಮಕರಸಂಕ್ರಮಣ
19-02-2021, ಶುಕ್ರವಾರ – ರಥಸಪ್ತಮಿ
11-03-2021, ಗುರುವಾರ – ಮಹಾಶಿವರಾತ್ರಿ
28-03-2021, ರವಿವಾರ – ಹೋಲಿಕಾಕಾಮದಹನ
####### ###### ###### ###### ######
ಶಾರ್ವರಿ ನಾಮ ಸಂವತ್ಸರವು ಜಗತ್ತಿನ ಸಕಲ ಜೀವಕೋಟಿಗೂ ಒಳಿತನ್ನು ಮಾಡಲಿ.ಬಂದಿರುವ ಸಂಕಷ್ಟಗಳು ದೂರಾಗಿ ಸಮೃದ್ಧಿ
ನೆಲೆಸಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು: ಆದ್ಯೋತನ್ಯೂಸ್