ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಶನಿವಾರ ಶಿಕ್ಷಕರಿಗೆ ಸನ್ಮಾನ,ನಿವೃತ್ತ ಶಿಕ್ಷಕರಿಗೆ ಸನ್ಮಾನ,ಎಸ್.ಎಸ್.ಎಲ್.ಸಿ.ಯಲ್ಲಿ
ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ,ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಶಿಕ್ಷಕ ವೃತ್ತಿಯು ಬಹಳ ಪವಿತ್ರವಾಗಿದೆ.ಅದೇ ರೀತಿ ಗೌರವ,ಘನತೆಯ ವೃತ್ತಿಯೂ ಆಗಿದೆ.ನಮ್ಮ ಶಿಕ್ಷಣವು ಬ್ರಿಟೀಷ್ ಪದ್ದತಿಯ ಶಿಕ್ಷಣದ ಮುಂದುವರಿದ ಭಾಗವಾಗಿದೆ.ಇಲ್ಲಿ ಶಿಕ್ಷಣ ಎಂದರೆ ಅಕ್ಷರಾಭ್ಯಾಸ,ಹಣಗಳಿಕೆ ಮಾಡಲು ಬೇಕಾದ್ದಂತಹದ್ದು ಇದರಿಂದಾಗಿಯೇ ಇತ್ತೀಚೆಗೆ ನಡೆದ ಬೆಂಗಳೂರು ಗಲಭೆ ಹಾಗೂ ಈಗ ಬರುತ್ತಿರುವ ಡ್ರಗ್ಸ್ ವ್ಯವಹಾರ.ಇಲ್ಲಿರುವವರೆಲ್ಲ ಶಿಕ್ಷಣ ಪಡೆದವರೆ.ಆದರೆ ಇವರಿಗೆ ಸಂಸ್ಕಾರ ಇಲ್ಲವಾಗಿದೆ.
ಆದ್ದರಿಂದ ರಾಷ್ಟ್ರೀಯತೆಯನ್ನು ಬೆಳೆಸುವ ನಮ್ಮ ಸನಾತನ ಸಂಸ್ಕೃತಿಯನ್ನು ಬೆಳೆಸುವ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆವಹಿಸಿದ್ದರು.
ವೇದಿಕೆಯಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ,ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಂ.ನಾಯ್ಕ,ಉಪಸ್ಥಿತರಿದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದಸ್ವಾಮಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗಣಪತಿ ಎಂ ಗೊಂಡ,ಪೀಟರ್ ಐ ಲೋಫೀಸ್,ಶಂಕರಪ್ಪ ಎನ್.,ದೇವಕಿ ಹೆಚ್.ನಾಯ್ಕ,ಜಯಂತಿ ಎಸ್.ಹೆಗಡೆ,ಶಾರದಾ ಆರ್.ನಾಯಕರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕರಾದ,ವಿಜಯಲಕ್ಷ್ಮಿ ಭಟ್ಟ,ಆರ್.ಎನ್.ಹಳಕಾರ,ಟಿ.ಎನ್.ಕೋಮಾರ್,ಸಿ.ಪಿ.ಕೊಡಿಯಾ,ಸುರೇಖಾ ನಾಯ್ಕ,ಸವಿತಾ ಈ.ಶಾನಭಾಗ,ಶ್ರೀಶೈಲಾ ಜಿ.ಹೆಗಡೆ,ಕೇಶವ ವಿ.ಪಟಗಾರ,ಅನಸೂಯ ಜಿ.ಹೆಗಡೆ,ವನಿತಾ ಜಿ.ನಾಯ್ಕ,ನಾಗರಾಜ ಕೆ.ನಾಯ್ಕರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಶಿಕ್ಷಕರಾದ ಸಂಶಿಯಾ ಸ.ಶಿ.,ಕೃಷ್ಣಮೂರ್ತಿ ಎ.ಹೆಗಡೆ,ಲಂಬೋಧರ ಪಟಗಾರ,ಶ್ರೀಕಾಂತ ಬಿ.ನಾಯ್ಕ,ಅನಿತಾ ಬಿ.ಸಿರ್ಸಿಕರ್ ನ್ನು ಸನ್ಮಾನಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಅನಿರುದ್ದ ಗುತ್ತೀಕರ್,ಸಾತ್ವಿಕ್ ಎಸ್.ಹೆಗಡೆ,ಸಹನಾ ಹೆಗಡೆಯವರನ್ನೂ ಸನ್ಮಾನಿಸಲಾಯಿತು.
,🙌🙌👍🙏